ಜೋಗಿ ಪ್ರೇಮ್ ತಮ್ಮ ಚಿತ್ರಗಳನ್ನು ಸ್ಪೆಷಲ್ ಆಗಿ ಪ್ರಮೋಟ್ ಮಾಡೋದ್ರಲ್ಲಿ ಸಖತ್ ಡಿಫರೆಂಟ್. ಪ್ರತಿ ಬಾರಿಯೂ ವ್ಹಾವ್ ಎನ್ನಿಸುವ ತಂತ್ರಗಳನ್ನು ಅದ್ಭುತವಾಗಿ ಬಳಸುವ ಪ್ರೇಮ್, ಈ ಬಾರಿ ಏಕ್ ಲವ್ ಯಾ ಚಿತ್ರಕ್ಕೆ ಸರಿಗಮಪ ಹನುಮಂತನನ್ನು ಕರೆ ತಂದಿದಾರೆ. ಏಕ್ ಲವ್ ಯಾ ಚಿತ್ರದ ಹಾಡೊಂದನ್ನು ಹನುಮ ಹಾಡಲಿದ್ದಾರೆ.
ಈಗಾಗಲೇ ಹೊರಬಿದ್ದಿರುವ ಏಕ್ ಲವ್ ಯಾದ ಟ್ರ್ಯಾಕ್ಸ್, ಕೇಳುಗರ ಕಿವಿಯಲ್ಲಿ ಗುಂಯ್‍ಗುಟ್ಟುತ್ತಿವೆ. ರಕ್ಷಿತಾ ಪ್ರೇಮ್ ಸೋದರ ರಾಣಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗ ಮತ್ತೊಂದು ಹಾಡು.. ಅದೂ 2019ರಲ್ಲಿ ಕಿರುತೆರೆಯ ಸೆನ್ಸೇಷನ್ ಆಗಿದ್ದ ಹನುಮಂತನ ಧ್ವನಿಯಲ್ಲಿ. ಲಮಾಣಿ ಜಾನಪದ ಗೀತೆಗಳನ್ನು ಜವಾರಿ ಶೈಲಿಯಲ್ಲಿ ಹಾಡಿ ಕನ್ನಡಿಗರ ಮನಸ್ಸು ಗೆದ್ದ ಹನುಮಂತನ ಮೇಲೆ ಪ್ರೇಮ್ ಕಣ್ಣು ಬಿದ್ದಿದೆ.