ಪ್ರೀತ್ಸೆ ಪ್ರೀತ್ಸೆ.. ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಗಾಯಕ ಹೇಮಂತ್. ಹಂಸಲೇಖ ಅವರ ಶಿಷ್ಯನಾಗಿರುವ ಹೇಮಂತ್ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ್ದು ಸ್ವತಃ ಹಂಸಲೇಖ. ಅವರೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾಕ್ಟರ್ ಕೃತ್ತಿಕಾ ಅವರೊಂದಿಗೆ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಹೇಮಂತ್ ಸಿಂಗರ್ ಆದರೆ, ಕೃತ್ತಿಕಾ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಡಾಕ್ಟರ್.
ಕೊರೊನಾ ಕಾರಣದಿಂದಾಗಿ ಸರಳವಾಗಿ ನಡೆದ ಮದುವೆಯಲ್ಲಿ ಚಿತ್ರರಂಗದ ಕೆಲವೇ ಕೆಲವು ಆತ್ಮೀಯರು ಹಾಗೂ ಕುಟುಂಬ ಸದಸ್ಯರಷ್ಟೇ ಭಾಗವಹಿಸಿದ್ದರು.