` ಚುಟು ಚುಟು ಹುಡುಗಿ ಹೊಗೆ ಬಿಟ್ಟಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚುಟು ಚುಟು ಹುಡುಗಿ ಹೊಗೆ ಬಿಟ್ಟಾಗ..
Ashika Ranganath

ಮುಗುಳುನಗೆಯಲ್ಲೇ ಚುಟು ಚುಟು ಅನ್ನಿಸಿದ ಹುಡುಗಿ ಅಶಿಕಾ ರಂಗನಾಥ್ ಹುಟ್ಟುಹಬ್ಬದ ದಿನವೇ ಹೊಗೆ ಬಿಟ್ಟಿದ್ದಾರೆ. ಇದು ಮದಗಜ ಚಿತ್ರದ ಪೋಸ್ಟರ್. ಆಶಿಕಾ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ರಿಲೀಸ್ ಮಾಡಿದ ಪೋಸ್ಟರ್‍ನಲ್ಲಿ ಆಶಿಕಾ ಸಿಗರೇಟು ಸೇದುತ್ತಿರೋ ಫೋಟೋ ಇದೆ.

ಮದಗಜದಲ್ಲಿ ಆಶಿಕಾ ಹಳ್ಳಿ ಹುಡುಗಿ ಎನ್ನಲಾಗಿತ್ತು. ಅದೇ ರೀತಿಯ ಪೋಸ್ಟರ್ ಕೂಡಾ ಹೊರಬಿದ್ದಿತ್ತು. ಈಗ ಮತ್ತೊಂದು ಪೋಸ್ಟರ್. ಅದೂ 24 ಮುಗಿಸಿ, 25ಕ್ಕೆ ಕಾಲಿಟ್ಟ ವೇಳೆ ಚಿತ್ರತಂಡ ಬಿಟ್ಟಿರೋ ಪೋಸ್ಟರ್, ಮದಗಜ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿರುವುದು ನಿಜ.

ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಪಕ. ಶ್ರೀಮುರಳಿ ಹೀರೋ ಆಗಿರೋ ಚಿತ್ರಕ್ಕೆ ಆಶಿಕಾ ಹೀರೋಯಿನ್.