ರಿಷಬ್ ಶೆಟ್ಟಿ ಅನಂತ್ ನಾಗ್ ಅವರ ಅಭಿಮಾನಿ. ಅವರಿಗೆ ನಿರ್ದೇಶನವನ್ನೂ ಮಾಡಿರುವ ರಿಷಬ್, ಅನಂತ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಅಭಿಯಾನವನ್ನೇ ಶುರು ಮಾಡಿದವರು. ಈಗ ಅವರನ್ನು ಪರಿಚಯಿಸುವ ಒಂದು ಕಿರುಚಿತ್ರವನ್ನೇ ಡಾಕ್ಯುಮೆಂಟರಿ ರೂಪದಲ್ಲಿ ಅಭಿಮಾನಿಗಳ ಎದುರು ಇಟ್ಟಿದ್ದಾರೆ.
ಅನಂತ್ ನಾಗ್ ಅವರ ರಂಗಭೂಮಿ, ಹಿಂದಿ, ಮರಾಠಿ, ಕನ್ನಡ ಚಿತ್ರಗಳ ನಟನೆ, ನಟನೆಯಲ್ಲಿನ ವೈವಿಧ್ಯ, ಸಂಗೀತ... ಎಲ್ಲ ಸಾಧನೆಯನ್ನೂ ಚಿಕ್ಕದಾಗಿ ಮತ್ತು ಅಷ್ಟೇ ಚೊಕ್ಕವಾಗಿ ಚೆಂದದ ಇಂಗ್ಲೀಷಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಅಭಿಮಾನಿಯೊಬ್ಬ.. ಅಭಿಮಾನದಿಂದ.. ಅಭಿಮಾನಕ್ಕೋಸ್ಕರವೇ ಮಾಡಿದ ಕಿರುಚಿತ್ರ.