Print 
puneeth rajkumar, shivarajkumar,

User Rating: 0 / 5

Star inactiveStar inactiveStar inactiveStar inactiveStar inactive
 
ಗಾಜನೂರಿನಲ್ಲಿ ಅಣ್ಣ ತಮ್ಮ & ಫ್ಯಾಮಿಲಿ
Puneeth Rajkumar, Shivarajkumar

ಶಿವಣ್ಣ, ಪುನೀತ್ ಇಬ್ಬರೂ ಒಟ್ಟಿಗೇ ಒಂದೇ ಸಮಯದಲ್ಲಿ ಸಿಕ್ಕರೆ ಅಭಿಮಾನಿಗಳಿಗೆ ಹಬ್ಬ. ಅದು ಇತ್ತೀಚೆಗೆ ಆಗಿದ್ದು ಗಾಜನೂರಿನಲ್ಲಿ. ಗಾಜನೂರು ಡಾ.ರಾಜ್ ಅವರ ಹುಟ್ಟೂರು. ಅಲ್ಲಿ ರಾಜ್ ಅವರ ತಂಗಿ ನಾಗಮ್ಮ ಮತ್ತು ಅವರ ಕುಟುಂಬವಿದೆ. ಸೋದರತ್ತೆ ನಾಗಮ್ಮನವರನ್ನ ನೋಡೋಕೆ ಕುಟುಂಬ ಸದಸ್ಯರು ಆಗಾಗ್ಗೆ ಅಲ್ಲಿಗೆ ಹೋಗುತ್ತಲೇ ಇರುತ್ತಾರೆ. ಇತ್ತೀಚೆಗೆ ಶಿವಣ್ಣ ಮತ್ತು ಪುನೀತ್ ಇಬ್ಬರೂ ಒಟ್ಟಿಗೇ ಕುಟುಂಬ ಸಮೇತ ಹೋಗಿದ್ದರು.

ಕುಟುಂಬದವರ ಜೊತೆ ಹೋದಾಗ ಖಾಸಗಿತನಕ್ಕಾಗಿ ಅದನ್ನು ಗುಟ್ಟಾಗಿಯೇ ಇಟ್ಟಿರುತ್ತಾರೆ. ಆದರೂ ಅದು ಹೇಗೋ ಹೊರಗೆ ಬಂದುಬಿಡುತ್ತೆ. ಈ ಬಾರಿಯೂ ಹಾಗೆಯೇ ಆಯ್ತು. ಅಣ್ಣ ತಮ್ಮ ಕುಟುಂಬದವರೊಂದಿಗೆ ಒಟ್ಟಿಗೇ ಇರುವಾಗ, ಇಬ್ಬರೂ ಬಂದಿದ್ದಾರೆ ಎಂದು ತಿಳಿದ ಕೆಲವು ಅಭಿಮಾನಿಗಳು ತೋಟದ ಮನೆಗೆ ಲಗ್ಗೆ ಹಾಕಿದರು. ಬೇಸರ ಮಾಡಿಕೊಳ್ಳದೆ ಅಭಿಮಾನಿಗಳ ಜೊತೆ ಫೋಸು ಕೊಟ್ಟ ಶಿವಣ್ಣ ಮತ್ತು ಪುನೀತ್, ನಂತರ ಕುಟುಂಬದವರೊಂದಿಗೆ ಕಾಲ ಕಳೆದರು.