ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಘೋಷಿಸಿದ್ದ ನಿರ್ದೇಶಕ ಪಿ.ಸಿ.ಶೇಖರ್, ಈಗ ಮಾನ್ವಿತಾ ಹರೀಶ್ ಜೊತೆ ಸಿನಿಮಾ ಶುರು ಮಾಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಏರುಪೇರಾದ ಡೇಟ್ಸ್‍ಗಳಿಂದಾಗಿ ಪ್ರಜ್ವಲ್ ದೇವರಾಜ್ ಚಿತ್ರವನ್ನು ಪೋಸ್ಟ್‍ಪೋನ್ ಮಾಡಿದ್ದಾರೆ. ಆ ಗ್ಯಾಪಿನಲ್ಲಿ ಮಾನ್ವಿತಾ ಹರೀಶ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಸ್ವಲ್ಪ ಹೀರೋಯಿನ್ ಓರಿಯಂಟೆಡ್ ಕಥೆ ಇದಾಗಿದ್ದು, ಮಾನ್ವಿತಾ ಅವರದ್ದು ಬೋಲ್ಡ್ ಹಳ್ಳಿ ಹುಡುಗಿ ಪಾತ್ರ. ರೈತನ ಮಗಳು. ಸ್ವತಃ ಕೃಷಿ ಮಾಡುವ ಹುಡುಗಿ ಎಂದಿರುವ ಪಿ.ಸಿ.ಶೇಖರ್ ನಾಯಕರಾಗಿ ನಕುಲ್ ಗೌಡ ಅವರನ್ನು ಸೆಲೆಕ್ಟ್ ಮಾಡಿದ್ದಾರೆ.
ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರದ ಬಗ್ಗೆ ಮಾನ್ವಿತಾ ಕೂಡಾ ಆತ್ಮವಿಶ್ವಾಸದಲ್ಲಿದ್ದಾರೆ. ಪಿ.ಸಿ.ಶೇಖರ್ ಚಿತ್ರಗಳಲ್ಲಿ ನಾಯಕಿಯರ ಪಾತ್ರಕ್ಕೆ ತೂಕವಿರುತ್ತದೆ. ಹೀಗಾಗಿಯೇ ಒಪ್ಪಿಕೊಂಡೆ ಎಂದಿರುವ ಮಾನ್ವಿತಾ, ಚಿತ್ರದ ಪಾತ್ರಕ್ಕೆ ತಯಾರಿಯನ್ನೂ ಆರಂಭಿಸಿದ್ದಾರೆ.