ಲಾಕ್ ಡೌನ್ ಫ್ರೀಯಾಗಿ, ಎಲ್ಲವೂ ಓಪನ್ ಆದ ನಂತರ ರಿಲೀಸ್ ಆಗುತ್ತಿರುವ ದೊಡ್ಡ ಚಿತ್ರ ಸಲಗ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್ ಎಂದು ಹೇಳಿಕೊಂಡಿರುವ ಹೊತ್ತಲ್ಲೇ, ಇತ್ತ ಲೂಸ್ ಮಾದ ಖ್ಯಾತಿಯ ಯೋಗಿಯ ಚಿತ್ರವೂ ಅದೇ ಹಬ್ಬಕ್ಕೆ ರಿಲೀಸ್ ಎನ್ನಲಾಗುತ್ತಿದೆ. ಯೋಗಿ ಅಭಿನಯದ ಲಂಕೆ ಚಿತ್ರವೂ ಹಬ್ಬದ ದಿನವೇ ರಿಲೀಸ್ ಎನ್ನುತ್ತಿದೆ.
ವಿಜಯ್ ಮತ್ತು ಯೋಗಿ ಇಬ್ಬರೂ ಮಾವ ಮತ್ತು ಅಳಿಯ. ದುನಿಯಾ ಚಿತ್ರಕ್ಕೆ ನಿರ್ಮಾಪಕರಾಗಿದ್ದುದು ಯೋಗಿ ಫ್ಯಾಮಿಲಿ. ವಿಜಯ್ ಆ ಚಿತ್ರದಿಂದ ದುನಿಯಾ ವಿಜಯ್ ಆದರೆ, ಅದೇ ಚಿತ್ರದಲ್ಲಿನ ಲೂಸ್ ಮಾದ ಪಾತ್ರದ ಹೆಸರು, ಯೋಗಿಯ ಹಿಂದೆ ಅಂಟಿಕೊಳ್ತು. ಈಗ ಅವರಿಬ್ಬರೂ ನಟಿಸಿರುವ ಚಿತ್ರಗಳು ಒಂದೇ ದಿನ ರಿಲೀಸ್ ಆಗುವ ಚಾನ್ಸ್ ಹೆಚ್ಚಾಗಿದೆ.