` ನಿರ್ಮಾಪಕ ರಮೇಶ್ ಕಶ್ಯಪ್ ಮನೆಗೆ ಡ್ರೈವರೇ ಕನ್ನ ಹಾಕಿದ್ದ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಿರ್ಮಾಪಕ ರಮೇಶ್ ಕಶ್ಯಪ್ ಮನೆಗೆ ಡ್ರೈವರೇ ಕನ್ನ ಹಾಕಿದ್ದ..!
Ramesh Kashyap

ನಿರ್ಮಾಪಕ ರಮೇಶ್ ಕಶ್ಯಪ್ ಅವರ ಮನೆಯಲ್ಲಿ ಜುಲೈ 10ರಂದು ಕಳ್ಳತನವಾಗಿತ್ತು. ಬಾಗಿಲು ಮುರಿದಿರಲಿಲ್ಲ. ನಕಲಿ ಕೀ ಬಳಸಿ ಮನೆಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ 3 ಲಕ್ಷ ಕ್ಯಾಷ್ ಮತ್ತು 710 ಗ್ರಾಂ ಚಿನ್ನಾಭರಣ ದೋಚಿದ್ದರು. ಬೆನ್ನು ಹತ್ತಿದವರಿಗೆ ಸಿಕ್ಕಿದ್ದು ಕಳ್ಳ ಅಭಿಷೇಕ್.

ಅಭಿಷೇಕ್‍ನನ್ನು ಕರೆ ತಂದು ಬಾಯಿ ಬಿಡಿಸಿದಾಗ ಹೊರಬಿದ್ದ ಹೆಸರು ಚಂದ್ರಶೇಖರ್‍ದು. ಆತನ್ಯಾರು ಎಂದರೆ ರಮೇಶ್ ಕಶ್ಯಪ್ ಅವರ ಮನೆಯ ಕಾರು ಡ್ರೈವರ್. ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ನಕಲಿ ಕೀ ಮಾಡಿಸಿ ಗೆಳೆಯ ಅಭಿಷೇಕ್‍ನಿಗೆ ಕೊಟ್ಟು ಕಳ್ಳತನ ಮಾಡಿಸಿದ್ದ.