Print 
kavya shetty

User Rating: 0 / 5

Star inactiveStar inactiveStar inactiveStar inactiveStar inactive
 
ಮೋಹನ್ ಲಾಲ್ ಚಿತ್ರಕ್ಕೆ ಲಂಕೆಯ ನಾಯಕಿ
Kavya Shetty Image

ಲಾಕ್ ಡೌನ್ ಸಮಯದಲ್ಲಿ ಅತೀ ಹೆಚ್ಚು ಸದ್ದು ಮತ್ತು ಸುದ್ದಿ ಮಾಡಿದ್ದು ಮಲಯಾಳಂ ಚಿತ್ರೋದ್ಯಮ. ಹಲವು ಕಲಾವಿದರಲ್ಲಿ ಮಲಯಾಳಂ ಚಿತ್ರದಲ್ಲಿ ನಟಿಸಬೇಕು ಎನ್ನುವ ಕನಸು ಬಿತ್ತಿದೆ. ಈ ವೇಳೆಯಲ್ಲಿಯೇ ಲಂಕೆ ಚಿತ್ರದ ಹೀರೋಯಿನ್ ಕಾವ್ಯಾ ಶೆಟ್ಟಿಗೆ ಮೋಹನ್ ಲಾಲ್ ಜೊತೆಗಿನ ಚಿತ್ರದಲ್ಲಿ ಚಾನ್ಸ್ ಸಿಕ್ಕಿದೆ.

ಲೂಸಿಫರ್ ಅನ್ನೋ ವಂಡರ್ ಕೊಟ್ಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಚಿತ್ರ ಬ್ರೋ ಡ್ಯಾಡಿ. ಈ ಚಿತ್ರದಲ್ಲಿ ಮೋಹನ್ ಲಾಲ್ ಅಷ್ಟೇ ಅಲ್ಲ, ಪೃಥ್ವಿರಾಜ್ ಕೂಡಾ ನಟಿಸುತ್ತಿದ್ದಾರೆ. ಪೃಥ್ವಿರಾಜ್‍ಗೆ ಹೀರೋಯಿನ್ ಕಾವ್ಯಾ ಶೆಟ್ಟಿ. `ಒಂದು ಮುದ್ದಾದ ಪಾತ್ರ. ಸೂಸನ್ ಅನ್ನೋದು ನನ್ನ ಪಾತ್ರದ ಹೆಸರು. ಹೈದರಾಬಾದಿನಲ್ಲಿ ಶೂಟಿಂಗ್ ನಡೆಯುತ್ತಿದೆ' ಎಂದಿರುವ ಕಾವ್ಯಾ, ಮಲಯಾಳಂನಲ್ಲಿ 2ನೇ ಚಿತ್ರದಲ್ಲೇ ಸಿಕ್ಕಿರೋ ದೊಡ್ಡ ಅವಕಾಶಕ್ಕೆ ಥ್ರಿಲ್ ಆಗಿದ್ದಾರೆ.