ಪಾವನಾ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿ ಹೋಗಿದ್ದಾರೆ. ಈಗಾಗಲೇ ಕೈಲಿ 8 ಚಿತ್ರಗಳಿವೆ. ಇದರ ಜೊತೆ 9ನೇ ಸಿನಿಮಾ. ಶ್ರೀನಗರ ಕಿಟ್ಟಿ ಕಮ್ ಬ್ಯಾಕ್ ಮಾಡುತ್ತಿರುವ ಗೌಳಿ ಚಿತ್ರಕ್ಕೆ ಪಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನನಗೆ ಒಳ್ಳೊಳ್ಳೆಯ ಪಾತ್ರಗಳೇ ಸಿಗುತ್ತಿವೆ. ಕಥೆಗಳು ಹೊಸದಾಗಿವೆ. ಕೇಳಿದ ಕಥೆಗಳಲ್ಲಿ ಗೌಳಿಯ ನನ್ನ ಪಾತ್ರ ಇಷ್ಟವಾಯಿತು ಎಂದಿದ್ದಾರೆ ಪಾವನಾ.
ರಘು ಸಿಂಗಂ ನಿರ್ಮಾಣದ ಗೌಳಿ ಚಿತ್ರಕ್ಕೆ ಸೂರ ನಿರ್ದೇಶಕ. ಆಗಸ್ಟ್ 3ನೇ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ.
ಸದ್ಯಕ್ಕೆ ಪಾವನಾ ಕೈಲಿ ತೂತುಮಡಿಕೆ, ರುದ್ರಿ, ಕಲಿವೀರ, ಮೈಸೂರು ಡೈರೀಸ್, ಕನ್ನಡಿಗ, ಸದ್ದು, ಫೈಟರ್, ಮೆಹಬೂಬ ಚಿತ್ರಗಳಿವೆ. ಫೈಟರ್ ಮತ್ತು ಮೆಹಬೂಬ ಬಿಟ್ಟರೆ ಉಳಿದ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಬಿಡುಗಡೆ ಹಂತದಲ್ಲಿವೆ.