2018ರಲ್ಲಿ ಮುಸ್ತಫಾ ಜೊತೆ ಮದುವೆಯಾಗಿದ್ದರು ಪ್ರಿಯಾಮಣಿ. ರಿಜಿಸ್ಟರ್ ಮ್ಯಾರೇಜ್ ಆಗಿ, ಅದ್ಧೂರಿ ಆರತಕ್ಷತೆ ಮಾಡಿಕೊಂಡಿದ್ದರು. ಅಂತರ್ ಧರ್ಮೀಯ ವಿವಾಹವಾದರೂ, ವಿವಾದವಾಗದಂತೆ ನೋಡಿಕೊಂಡಿದ್ದರು. ಆದರೆ, ಈಗ ಮೊದಲನೇ ಹೆಂಡತಿ ಬಹಿರಂಗವಾಗಿ ಕಾಣಿಸಿಕೊಳ್ಳುವುದರೊಂದಿಗೆ ವಿವಾದ ಭುಗಿಲೆದ್ದಿದೆ.
ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ ಮುಸ್ತಫಾ & ಪ್ರಿಯಾಮಣಿ ಅವರ ವಿವಾಹ ಅಸಿಂಧು. ನನ್ನ ಮತ್ತು ಮುಸ್ತಫಾ ಅವರ ಮಧ್ಯೆ ವಿಚ್ಛೇದನವೇ ಆಗಿಲ್ಲ. ಅಧಿಕೃತವಾಗಿ ನಾನಿನ್ನೂ ಅವರ ಪತ್ನಿ. ಜೊತೆಗೆ ಮುಸ್ತಫಾ, ಪ್ರಿಯಾಮಣಿ ಅವರನ್ನು ಮದುವೆಯಾಗುವ ವೇಳೆ ತಾವು ಬ್ಯಾಚುಲರ್ ಎಂದು ಹೇಳಿಕೊಂಡಿದ್ದಾರೆ. ಇದು ವಂಚನೆ' ಎಂದಿದ್ದಾರೆ
ನಾನು ನನ್ನ ಮೊದಲ ಪತ್ನಿ ಆಯೆಷಾಗೆ ಮತ್ತು ಮಕ್ಕಳ ಆರೈಕೆಗೆ ಹಣ ನೀಡುತ್ತಿದ್ದೇನೆ. ನಾವಿಬ್ಬರೂ 2013ರಲ್ಲಿಯೇ ಬೇರೆಯಾಗಿದ್ದೇವೆ. ಇದು ಹಣ ಹೊಡೆಯುವ ತಂತ್ರ ಎಂದಿದ್ದಾರೆ ಮುಸ್ತಫಾ.
ನಮ್ಮಿಬ್ಬರ ಮದುವೆ ಸುರಕ್ಷಿತವಾಗಿದೆ. ನಾನು ಮತ್ತು ಮುಸ್ತಫಾ ಇಬ್ಬರೂ ಚೆನ್ನಾಗಿದ್ದೇವೆ ಎಂದಿದ್ದಾರೆ ಪ್ರಿಯಾಮಣಿ.
ಪ್ರಿಯಾಮಣಿ ಮದುವೆಯಾಗಿ ಅಧಿಕೃತವಾಗಿಯೇ 3 ವರ್ಷಗಳಾಗಿವೆ. ಮದುವೆಯೇನೂ ಸೀಕ್ರೆಟ್ ಆಗಿ ಇರಲಿಲ್ಲ. ರಿಜಿಸ್ಟರ್ ಕೂಡಾ ಆಗಿದೆ. ಕಾಂಟ್ರವರ್ಸಿಗಳನ್ನು ದೂರವೇ ಇಟ್ಟು, ಸಿನಿಮಾಗಳಿಂದ ಮಾತ್ರವೇ ಸುದ್ದಿಯಾಗುತ್ತಿದ್ದ ಪ್ರಿಯಾಮಣಿ, ಇದೇ ಮೊದಲ ಬಾರಿ ಸಿನಿಮಾ ಅಲ್ಲದ ಕಾರಣಕ್ಕೆ ಸುದ್ದಿಯಾಗಿದ್ದಾರೆ.