ಮಾತಿನ ಮಲ್ಲ ಮಠ ಗುರು ಪ್ರಸಾದ್ ಅವರನ್ನು ಸುಮ್ಮನೆ ಬಿದ್ದಿರಿ. ಹೆಣದಂತೆ ಬಿದ್ದಿರಿ ಎಂದರೆ ಏನು ಮಾಡಬಹುದು? ಡೈರೆಕ್ಟರ್ ಪ್ರಭು ಶ್ರೀನಿವಾಸ್ ಹಾಗೆ ಹೇಳಿದರೆ ಗುರು ಪ್ರಸಾದ್, ಕಮಕ್ ಕಿಮಕ್ ಎನ್ನದೆ ಹೆಣವಾಗುತ್ತಾರೆ. ಏಕೆಂದರೆ ಪೇಮೆಂಟು, ಕ್ಯಾರೆಕ್ಟರು ಎರಡೂ ಚೆನ್ನಾಗಿದೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಪ್ರಭು ಶ್ರೀನಿವಾಸ್, ಬಾಡಿ ಗಾಡ್ ಅನ್ನೋ ಸಿನಿಮಾ ರೆಡಿ ಮಾಡುತ್ತಿದ್ದು, ಆ ಚಿತ್ರದಲ್ಲಿ ಗುರು ಪ್ರಸಾದ್ ಅವರಿಗೆ ಹೆಣದ ಪಾತ್ರ. ಅವರಿಗೆ ಹೀರೋಯಿನ್ನೂ ಇದ್ದಾರಂತೆ. ಪದ್ಮಜಾ ರಾವ್. ಮೊದಲ ಬಾರಿಗೆ ಹೆಣದ ಪಾತ್ರ ಮಾಡುತ್ತಿದ್ದೇನೆ ಎಂದಿರೋ ಗುರು ಪ್ರಸಾದ್, ಚಿತ್ರದ ಕಥೆಯ ಬಗ್ಗೆ ಥ್ರಿಲ್ಲಂತೂ ಆಗಿದ್ದಾರೆ.
ಇದು ವಿದೇಶದಲ್ಲಿ ನೆಲೆಸಿರುವ ಮಕ್ಕಳು ಮತ್ತು ಮಕ್ಕಳಿಗಾಗಿ ಇಲ್ಲೇ ಕಾಯುತ್ತಿರುವ ಹೆತ್ತವರ ಕಥೆ ಎಂದಿದ್ದಾರೆ ಪ್ರಭು ಶ್ರೀನಿವಾಸ್. ಶಾಸಕ ಎಚ್.ಕೆ.ಕುಮಾರಸ್ವಾಮಿ ಪುತ್ರ ಮನೋಜ್, ಇಲ್ಲಿ ಗುರು ಪ್ರಸಾದ್ ಅವರ ಹೆಣ ಕಾಯುವ ಪಾತ್ರ ಮಾಡಿದ್ದಾರೆ. ಮನೋಜ್ ಅವರು ಶಶಾಂಕ್ ಅವರ ಮೊಗ್ಗಿನ ಮನಸ್ಸು ಮೂಲಕ ಚಿತ್ರರಂಗಕ್ಕೆ ಬಂದವರು.