2ನೇ ಲಾಕ್ ಡೌನ್ ಮುಗಿದ ನಂತರ ಮೊದಲು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಭಜರಂಗಿ 2. ಆದರೆ, ಅದಕ್ಕೂ ಮೊದಲೇ ತೆರೆಗೆ ಬರೋಕೆ ರೆಡಿಯಾಗಿದೆ ಸಲಗ. ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬವಿದ್ದು ಆ ದಿನವೇ ಸಲಗ ರಿಲೀಸ್ ಆಗಲಿದೆ.
ಸಲಗ, ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಸಿನಿಮಾ. ಅವರೇ ಹೀರೋ. ಹೀರೋಯಿನ್ ಆಗಿ ಸಂಜನಾ ಆನಂದ್ ಇದ್ದರೆ, ಮತ್ತೊಂದು ಪ್ರಧಾನ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಚರಣ್ ರಾಜ್ ಕೂಡಾ ನಟಿಸಿದ್ದಾರೆ. ಹಬ್ಬಕ್ಕೆ ಒಂದೆರಡು ದಿನ ಮೊದಲೇ ಚಿತ್ರ ರಿಲೀಸ್ ಆದರೂ ಆಶ್ಚರ್ಯವಿಲ್ಲ. ಚಿತ್ರತಂಡ ರಿಲೀಸ್ ಡೇಟ್‍ನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.