ಭಜರಂಗಿ 2 ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆಯೇ ಸಂಚಲನ ಶುರುವಾಗಿದೆ. ಚಿತ್ರದ ಪೋಸ್ಟರ್, ಟೀಸರುಗಳಲ್ಲಿ ಎಲ್ಲರಿಗಿಂತ ಹೆಚ್ಚು ಆಶ್ಚರ್ಯ ಹುಟ್ಟಿಸಿದ್ದವರು ನಟಿ ಶೃತಿ. ಶೃತಿ ಇದುವರೆಗೆ ನಟಿಸಿರುವುದು ಸಾಂಸಾರಿಕ ಮತ್ತು ಕಾಮಿಡಿ ಪಾತ್ರಗಳಲ್ಲಿ. ಆದರೆ.. ಕೈಲಿ ಚುಟ್ಟಾ ಹಿಡಿದು, ಮಂತ್ರವಾದಿಯಂತೆ ಭಯ ಹುಟ್ಟಿಸಿದ್ದ ಶೃತಿಯ ಪೋಸ್ಟರ್ ಬೆರಗು ಹುಟ್ಟಿಸಿದ್ದಂತೂ ನಿಜ.
ನನಗೆ ಹರ್ಷ ಮೊದಲು ನನ್ನ ಪಾತ್ರ ಹೇಳಿದಾಗ ಅಚ್ಚರಿಯಾಗಿದ್ದು ನಿಜ. ಒಪ್ಪಿಕೊಳ್ಳೋದೋ ಬೇಡವೋ ಎಂಬ ಗೊಂದಲದಲ್ಲಿದ್ದಾಗ, ನಾನು ನಿಮ್ಮನ್ನು ಕಲ್ಪನೆಯಲ್ಲಿಟ್ಟುಕೊಂಡೇ ಪಾತ್ರದ ವಿಷ್ಯುಯಲೈಸ್ ಮಾಡಿದ್ದೇನೆ ಎಂದಾಗ ಓಕೆ ಎಂದುಬಿಟ್ಟೆ. ಚಿತ್ರಕ್ಕೆ ಓಕೆ ಎಂದ ಮೇಲೆ ಅಡ್ವಾನ್ಸ್ ಕಳಿಸಿಕೊಟ್ಟರು ಜೊತೆಯಲ್ಲಿ ಸಿಗಾರ್ ಕೂಡಾ ಇತ್ತು. ಏನ್ ಡೈರೆಕ್ಟ್ರೇ.. ಅಡ್ವಾನ್ಸ್ ಕಳಿಸೋದು ಬಿಟ್ಟು ಸಿಗಾರ್ ಕಳಿಸಿದ್ದೀರಲ್ಲ ಎಂದು ರೇಗಿಸುತ್ತಲೇ ಇರುತ್ತೇನೆ' ಎಂದು ಅನುಭವ ಹಂಚಿಕೊಂಡಿರೋ ಶೃತಿ, ಆ ಪಾತ್ರಕ್ಕಾಗಿ ಮನೆಯಲ್ಲಿಯೇ ಕನ್ನಡಿ ಮುಂದೆ ನಿಂತುಕೊಂಡು ಸಿಗಾರ್ ಹಿಡಿಯೋದು ಹೇಗೆ ಅನ್ನೋದನ್ನ ಪ್ರಾಕ್ಟೀಸ್ ಮಾಡಿದರಂತೆ.
ನೀವು ಇದುವರೆಗೆ ನೋಡಿರುವ ಶೃತಿಯೇ ಬೇರೆ. ಈ ಚಿತ್ರದಲ್ಲಿ ನಿಮಗೆ ಕಾಣಸಿಗುವ ಶೃತಿಯೇ ಬೇರೆ ಎಂದು ಹೇಳುತ್ತಾರೆ ಶೃತಿ.
ಎ.ಹರ್ಷ ನಿರ್ದೇಶನದ ಚಿತ್ರ ಭಜರಂಗಿ 2. ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರದಲ್ಲಿ ಶಿವಣ್ಣ ಹೀರೋ. ಭಾವನಾ ಹೀರೋಯಿನ್.