` ಸಾ.ರಾ.ಗೋವಿಂದು ಕಾಂಗ್ರೆಸ್ ಸೇರ್ಪಡೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಾ.ರಾ.ಗೋವಿಂದು ಕಾಂಗ್ರೆಸ್ ಸೇರ್ಪಡೆ
Sa Ra Govindu Image

ಹಿರಿಯ ನಿರ್ಮಾಪಕ, ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ, ಫಿಲಂ ಚೇಂಬರ್‍ನ ಮಾಜಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ, ಸಾ.ರಾ.ಗೋವಿಂದು ಕಾಂಗ್ರೆಸ್ ಸೇರಿದ್ದಾರೆ ಡಿಕೆಶಿ ಘೋಷಿಸಿದ್ದಾರೆ. ಸಾ.ರಾ.ಗೋವಿಂದು ಹುಟ್ಟುಹಬ್ಬದ ಪ್ರಯುಕ್ತ ರಾಜಾಜಿನಗರದಲ್ಲಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆಶಿ ಮತ್ತು ಸಿದ್ದು, ಸಾ.ರಾ.ಗೋವಿಂದು ಅವರಿಗೆ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಮುಂದಿನ ದಿನಗಳಲ್ಲಿ ಸಾ.ರಾ.ಗೋವಿಂದು ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ಮಳೆ ಸುರಿಯಿತು. ಇದು ಸಾ.ರಾ.ಗೋವಿಂದು ಅವರಿಗೆ ಶುಭ ಸೂಚಕ ಎಂದ ಸಿದ್ದು ಡಾ.ರಾಜ್ ಅವರಂತೆ ಸಾರಾ ಕೂಡಾ ಚಾಮರಾಜನಗರದ ಕಡೆಯಿಂದ ಬಂದವರು. ನಮ್ಮನ್ನೆಲ್ಲ ಡಾ.ರಾಜ್ ನಮ್ಮ ಕಾಡಿನವರು ಎಂದೇ ಕರೆಯುತ್ತಿದ್ದರು ಎಂದು ನೆನಪಿಸಿಕೊಂಡರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery