` ಭಜರಂಗಿ ಬ್ರೇಕಿಂಗ್ ನ್ಯೂಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಜರಂಗಿ ಬ್ರೇಕಿಂಗ್ ನ್ಯೂಸ್
Bhajarangi 2 Movie Image

ಕೊರೊನಾ ಲಾಕ್ ಡೌನ್ ಮುಗಿದು, ಥಿಯೇಟರ್ ಓಪನ್ ಮಾಡೋಕೆ ಅನುಮತಿ ಸಿಕ್ಕ ಬೆನ್ನಲ್ಲೇ ದೊಡ್ಡ ಚಿತ್ರ ರಿಲೀಸ್ ಆಗಬೇಕು ಎಂಬ ಕೂಗು ಕೇಳಿ ಬಂದಿತ್ತು. ಮೊದಲ ಲಾಕ್ ಡೌನ್ ಮುಗಿದಾಗ ಅಂತಾದ್ದೊಂದು ಧೈರ್ಯ ತೋರಿಸಿದ್ದದ್ದು ಪೊಗರು ಚಿತ್ರತಂಡ. ಈ ಬಾರಿ ಚಿತ್ರರಂಗದ ಸೀನಿಯರ್ ಪ್ರೊಡ್ಯೂಸರ್ ಆಗಿರುವ ಜಯಣ್ಣ-ಭೋಗೇಂದ್ರ ಮುಂದೆ ಬಂದಿದ್ದಾರೆ. ಭಜರಂಗಿ 2 ಚಿತ್ರವನ್ನು ಸೆಪ್ಟೆಂಬರ್ 10ರಂದು ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ.

ಸದ್ಯಕ್ಕೆ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ್ದರೂ, ಸೆಪ್ಟೆಂಬರ್ ಹೊತ್ತಿಗೆ ಅದು 100% ಆಗಲಿದೆ ಎಂಬುದು ಒಂದು ನಿರೀಕ್ಷೆ. ಇದರ ನಡುವೆ ಆಗಸ್ಟ್ ವೇಳೆಗೆ 3ನೇ ಅಲೆ ಎಂಬ ವರದಿಯಿದ್ದರೂ ಆಂಜನೇಯನ ಮೇಲೆ ಭಾರ ಹಾಕಿದ್ದಾರೆ ಜಯಣ್ಣ-ಭೋಗೇಂದ್ರ.

ಸೆಂಚುರಿ ಸ್ಟಾರ್ ಶಿವಣ್ಣ ಹೀರೋ ಆಗಿರುವ ಭಜರಂಗಿ 2 ಚಿತ್ರಕ್ಕೆ ಎ.ಹರ್ಷ ನಿರ್ದೇಶಕ. ಭಜರಂಗಿ ಸೂಪರ್ ಸಕ್ಸಸ್ ನಂತರ ಮತ್ತೆ ರಿಪೀಟ್ ಆಗಿರುವ ಜೋಡಿಯಿದು. ಭಾವನಾ ಮತ್ತು ಶೃತಿ ಪ್ರಮುಖ ಪಾತ್ರಗಳಲ್ಲಿರೋ ಚಿತ್ರ, ಭಾರೀ ಕುತೂಹಲ ಹುಟ್ಟಿಸಿದೆ. ಇದುವರೆಗೆ ಚಿತ್ರತಂಡ ರಿಲೀಸ್ ಮಾಡಿರುವ ಪೊಸ್ಟರ್, ಟ್ರೇಲರ್‍ಗಳು ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತಿದೆ. ಶಿವಣ್ಣ ಲುಕ್, ಮೇಕಿಂಗ್, ಭಾವನಾ, ಶೃತಿ, ಭಜರಂಗಿ ಲೋಕಿ.. ಎಲ್ಲರೂ ಬೆರಗು ಹುಟ್ಟಿಸುತ್ತಿದ್ದಾರೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery