ಒಂದು ಕಾಲದ ಸಾಫ್ಟ್ ಪೋರ್ನ್ ಚಿತ್ರಗಳ ಮಹಾರಾಣಿಯೇ ಆಗಿದ್ದ ಶಕೀಲಾ, ಈಗ ಒಂದು ಒಟಿಟಿ ಆರಂಭಿಸುತ್ತಿದ್ದಾರೆ. ಆ ಒಟಿಟಿಯಲ್ಲಿ ರಿಲೀಸ್ ಆಗುವುದು ಅವರದ್ದೇ ನಿರ್ಮಾಣದ ಚಿತ್ರಗಳು. ಶಕೀಲಾ ತಮ್ಮದೇ ಒಟಿಟಿ ಮಾಡುತ್ತಿರೋದಕ್ಕೆ ಕಾರಣ ಸೆನ್ಸಾರ್ ಪ್ರಾಬ್ಲಂ.
ಈ ಒಟಿಟಿಯಲ್ಲಿ ರಿಲೀಸ್ ಆಗಲಿರುವುದು ಅವರ ಮಗಳ ಚಿತ್ರಗಳೇ. ಶಕೀಲಾ ಅವರ ಮಗಳು ಮಿಲಾ ನಟಿಸಿರುವ ಅಟ್ಟರ್ ಫ್ಲಾಪ್ ಮೂವಿ ಮತ್ತು ರೊಮ್ಯಾಂಟಿಕ್ ಚಿತ್ರಗಳಲ್ಲಿ ಅಲ್ಲಿ ರಿಲೀಸ್ ಆಗಲಿವೆಯಂತೆ. ಆ ಒಟಿಟಿಗೆ ಕೆಆರ್ ಡಿಜಿಟಲ್ ಪ್ಲೆಕ್ಸ್ ಅನ್ನೋ ನಾಮಕರಣವೂ ಆಗಿದೆ.
ಅದು ಸಾಫ್ಟ್ ಪೋರ್ನ್ ಚಿತ್ರಗಳ ಒಟಿಟಿ ಅನ್ನೋದ್ರಲ್ಲೇನೂ ಡೌಟಿಲ್ಲ. ಆ ಚಿತ್ರಗಳಲ್ಲಿ ನಟಿಸಿರುವುದು ಅವರ ದತ್ತು ಪುತ್ರಿ ಮಿಲಾ. ಈ ಹಿಂದೆ ನನ್ನ ಚಿತ್ರಗಳಿಗೆ ಸೆನ್ಸಾರ್ನವರು ಸಮಸ್ಯೆ ಸೃಷ್ಟಿಸಿದರು. ಹೀಗಾಗಿ ನಾನು ಒಟಿಟಿ ಮೊರೆ ಹೋಗುತ್ತಿದ್ದೇನೆ ಎಂದಿದ್ದಾರೆ ಶಕೀಲಾ. ಸದ್ಯಕ್ಕೆ ಒಟಿಟಿ ಅಥವಾ ಆನ್ಲೈನ್ನಲ್ಲಿಯೇ ರಿಲೀಸ್ ಆಗುವ ಚಿತ್ರಗಳಿಗೆ ಸೆನ್ಸಾರ್ ನಿರ್ಬಂಧಗಳಿಲ್ಲ.