ಅರುಣಾ ಕುಮಾರಿ ಮತ್ತು ದರ್ಶನ್ ಕೇಸ್ನಲ್ಲಿ ಉಮಾಪತಿ ಶ್ರೀನಿವಾಸ್ ಒಂದು ಹಂತದವರೆಗೂ ವಿಲನ್ ಎಂಬಂತೆ ಬಿಂಬಿತವಾಗಿದ್ದರು. ದರ್ಶನ್ ಗೆಳೆಯರ ಹೇಳಿಕೆಗಳು, ಶ್ರೀನಿವಾಸ್ ಪ್ರೆಸ್ಮೀಟ್ ಎಲ್ಲವೂ ಅದಕ್ಕೆ ಪುಷ್ಟಿ ನೀಡುವಂತೆಯೇ ಇತ್ತು. ಕೊನೆಗೆ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸುವುದರೊಂದಿಗೆ ಎಲ್ಲದಕ್ಕೂ ಶುಭಂ ಹೇಳಿದ್ದರು ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್. ಆದರೆ.. ಅದು ಅಲ್ಲಿಗೇ ಮುಗಿದಿಲ್ಲ.
ಈ ವಿಚಾರವನ್ನು ಇಲ್ಲಿ ನಿಲ್ಲಿಸೋಣ ನಿರ್ಮಾಪಕರೇ ಎಂದು ಸ್ವತಃ ದರ್ಶನ್ ನನಗೆ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡೋದ ಬೇಡ ಎಂದಿದ್ದಾರೆ. ದಾಖಲೆ ಸಿಕ್ಕ ತಕ್ಷಣ ದರ್ಶನ್ ಸರ್ ನಾನು ಇಬ್ಬರು ಪ್ರೆಸ್ ಮಾಡಿ ಮಾಹಿತಿ ನೀಡುತ್ತೇವೆ. ಸ್ನೇಹ ಸರಿಯಾಗಿದೆ. ಆದರೆ.. ಕೇಸ್ನ್ನು ಕಾನೂನು ಹೋರಾಟವನ್ನು ಇಲ್ಲಿಗೇ ಬಿಡಲ್ಲ ಎಂದಿದ್ದಾರೆ ಉಮಾಪತಿ.