` ತಮಿಳಿಗೂ ಮೊದಲೇ ಕನ್ನಡದ ಅಖಾಡಕ್ಕೆ ಬಂದಿದ್ದರಂತೆ ವಿಜಯ್ ಸೇತುಪತಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ತಮಿಳಿಗೂ ಮೊದಲೇ ಕನ್ನಡದ ಅಖಾಡಕ್ಕೆ ಬಂದಿದ್ದರಂತೆ ವಿಜಯ್ ಸೇತುಪತಿ..!
Vijay Sethupathi

ವಿಜಯ್ ಸೇತುಪತಿ. ತಮಿಳು ನಟನಾದರೂ ಈಗ ನ್ಯಾಷನಲ್ ಲೆವೆಲ್ ಸ್ಟಾರ್ ಗಿರಿಯಿದೆ. ತಮಿಳು, ತೆಲುಗು ಚಿತ್ರಗಳಲ್ಲಿ ವಿಜಯ್ ಸೇತುಪತಿ ಮಿಂಚುತ್ತಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರೋ ವಿಜಯ್ ಸೇತುಪತಿ, ಸ್ಟಾರ್ ನಟ. ಇಂತಹ ವಿಜಯ್ ಸೇತುಪತಿ, ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾಗ ಕನ್ನಡದಲ್ಲೂ ನಟಿಸಿದ್ದರಂತೆ.

ಅಖಾಡ ಅನ್ನೋ ಕನ್ನಡ ಚಿತ್ರದಲ್ಲಿ ನಟಿಸಿದ್ದೆ. ಅದೊಂದು ಚಿಕ್ಕ ಪಾತ್ರ. ತಮಿಳಿನಲ್ಲಿ ಕಾಗುಣಿತ ಇಲ್ಲ. ಆದರೆ, ಕನ್ನಡದಲ್ಲಿ ಇದೆ. ಹೀಗಾಗಿ ನನಗೆ ಡೈಲಾಗ್ ಹೇಳೋದು ಕಷ್ಟವಾಗುತ್ತಿತ್ತು. ಅದಕ್ಕಾಗಿ ದಿನಗಟ್ಟಲೆ ಪ್ರಾಕ್ಟೀಸ್ ಮಾಡುತ್ತಿದ್ದೆ. ಈಗಲೂ ಆ ಡೈಲಾಗ್ ನೆನಪಿನಲ್ಲಿದೆ ಎಂದಿದ್ದಾರೆ ವಿಜಯ್ ಸೇತುಪತಿ. ಡೈಲಾಗ್ನ್ನೂ ಹೊಡೆದಿದ್ದಾರೆ.

ತಮಿಳು ಮತ್ತು ಕನ್ನಡದಲ್ಲಿ ಮಾಸ್ಟರ್ ಶೆಫ್ ಅನ್ನೋ ಕಾರ್ಯಕ್ರಮ ಶುರುವಾಗುತ್ತಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಿರೂಪಕ. ಹೀಗಾಗಿ ಕನ್ನಡದ ಶೋ ಉದ್ಘಾಟನೆಗೆ ವಿಜಯ್ ಸೇತುಪತಿ ಬೆಂಗಳೂರಿಗೆ ಬಂದಿದ್ದ ವೇಳೆ, ತಮ್ಮ ಬೆಂಗಳೂರು ದಿನಗಳನ್ನು ನೆನಪಿಸಿಕೊಂಡಿದ್ದಾರೆ.