` ದರ್ಶನ್ ಉಮಾಪತಿ ದೋಸ್ತಾ ಕಣೋ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ದರ್ಶನ್ ಉಮಾಪತಿ ದೋಸ್ತಾ ಕಣೋ..
Darshan, Umapathy

ರಾಬರ್ಟ್ ಚಿತ್ರದ ಹಾಡು.. ಆ ಹಾಡಿನ ಸಾಲು.. ವಿ ಆರ್ ಬ್ರದರ್ ಫ್ರಂ.. ಅನದರ್ ಮದರ್.. ದೋಸ್ತಾ ಕಣೋ.. ಅದು ಉಮಾಪತಿ ಶ್ರೀನಿವಾಸ್ ಮತ್ತು ದರ್ಶನ್ ಲೈಫಲ್ಲಿ ನಿಜವಾಗಿದೆ.

25 ಕೋಟಿ.. ಅರುಣಾ ಕುಮಾರಿ.. ಬ್ಯಾಂಕ್ ಸಾಲ.. ವಂಚನೆ ಆರೋಪ.. ದರ್ಶನ್ ಸ್ನೇಹಿತರಿಂದಲೇ ಉಮಾಪತಿ ಶ್ರೀನಿವಾಸ್ ಮೇಲೆ ಆರೋಪ.. ಉಮಾಪತಿಯವರೇ ಸ್ಪಷ್ಟನೆ ಕೊಡಬೇಕು ಎಂದಿದ್ದ ದರ್ಶನ್.. ಇವೆಲ್ಲದರ ಮಧ್ಯೆ ದರ್ಶನ್ ಉಮಾಪತಿ ಶ್ರೀನಿವಾಸ್ ಸ್ನೇಹ ಮುಗಿದ ಕಥೆನಾ ಎಂಬ ಅನುಮಾನಕ್ಕೆ ಕೊನೆಗೂ ತೆರೆ ಬಿದ್ದಿದೆ. ಪರಿಸ್ಥಿತಿ ಹತೋಟಿ ತಪ್ಪುತ್ತಿದ್ದರೂ.. ದರ್ಶನ್ ನಾನು ನನ್ನ ನಿರ್ಮಾಪಕರನ್ನು ಬಿಡಲ್ಲ ಎಂದಿದ್ದರು. ಉಮಾಪತಿ ಶ್ರೀನಿವಾಸ್ ಕೂಡಾ ಅಷ್ಟೆ.. ದರ್ಶನ್ ಸ್ನೇಹವನ್ನು ಬಿಡಲ್ಲ ಎಂದಿದ್ದರು.

ಅವರಿಬ್ಬರೂ ಒಂದಾಗಿದ್ದಾರೆ. ಉಮಾಪತಿ ಶ್ರೀನಿವಾಸ್ ಅವರಿಗೆ ಸ್ವತಃ ಕರೆ ಮಾಡಿದ್ದ ದರ್ಶನ್, ಉಮಾಪತಿಯವರನ್ನು ಮನೆಗೇ ಕರೆಸಿಕೊಂಡು ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ. ಆದರೆ.. ಈಗ ರೊಚ್ಚಿಗೆದ್ದಿರುವುದು ಅರುಣಾ ಕುಮಾರಿ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery