ಲಾಕ್ ಡೌನ್ ಟೈಮ್‍ನಲ್ಲಿ ಸುಮಾರು ಕಥೆ ಕೇಳಿದ್ದೇನೆ. ರಿಷಬ್ ಶೆಟ್ಟಿಯವರು ಹೇಳಿದ ಕಥೆ ಇಷ್ಟವಾಯ್ತು. ಅದರಲ್ಲೂ ಅವರ ಮಂಗಳೂರು ಕನ್ನಡದ ಶೈಲಿಯಲ್ಲಿ ಕತೆ ಕೇಳೋದೇ ಚೆಂದ. ಜೊತೆಗೆ ಜಯಣ್ಣ ಭೋಗೇಂದ್ರ ನಿರ್ಮಾಣ. ಮೇಕಿಂಗ್‍ನಲ್ಲೂ ಅದ್ಧೂರಿತನವಿರುತ್ತೆ ಅನ್ನೋ ವಿಶ್ವಾಸ. ಹೀಗಾಗಿ ಓಕೆ ಎಂದಿದ್ದೇನೆ ಎಂದಿದ್ದಾರೆ ಶಿವಣ್ಣ.
ಅಲ್ಲಿಗೆ ಕನ್ನಡದಲ್ಲಿ ಹೊಸದೊಂದು ಕಾಂಬಿನೇಷನ್ ಹುಟ್ಟಿದೆ. ತಾನು ಜ್ಯೂನಿಯರ್‍ಗಳೊಂದಿಗೂ ಕೆಲಸ ಮಾಡ್ತೇನೆ. ವಯಸ್ಸು, ಅನುಭವ ಮುಖ್ಯವಲ್ಲ ಅನ್ನೋ ಮೆಸೇಜ್ ರವಾನಿಸಿದ್ದಾರೆ ಶಿವಣ್ಣ. ಮತ್ತೊಮ್ಮೆ.
ನನ್ನ ಮತ್ತು ಶಿವಣ್ಣ ಹೊಸ ಕಾಂಬಿನೇಷನ್‍ನ ಹೊಸ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ. ಅದಕ್ಕೂ ಮೊದಲು ನಾನು ಇನ್ನೊಂದು ಸಿನಿಮಾ ಮುಗಿಸಬೇಕಿದೆ. ಬೇರೆಯದೇ ಕಥೆ ಸಿದ್ಧ ಮಾಡಿಕೊಂಡಿದ್ದೇನೆ. ಈಗಲೇ ಹೇಳಿದರೆ ಥ್ರಿಲ್ ಹೋಗುತ್ತೆ ಎಂದಿದ್ದಾರೆ ರಿಷಬ್ ಶೆಟ್ಟಿ.