ರಮ್ಯಾ ಅಂದ್ರೆ ಕನ್ನಡಿಗರಿಗೆ ವಿಶೇಷ ಪ್ರೀತಿ. ಹೀಗಾಗಿಯೇ ಇತ್ತೀಚೆಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಲೈವ್‍ಗೆ ಬಂದಾಗ ಮುತ್ತಿಕೊಂಡು ಬಿಟ್ಟರು. ಏನೋ ಸ್ಪೆಷಲ್ ಸುದ್ದಿ ಹೇಳ್ತಾರೆ ಎಂದುಕೊಂಡಿದ್ದವರಿಗೆ ರಮ್ಯಾ ಇದು ರೊಟೀನ್ ಎಂದಾಗ ನಿರಾಸೆಯಾಗಿದ್ದು ಹೌದಾದರೂ, ರಮ್ಯಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡ್ತಾನೇ ಹೋದರು.
ಅಭಿಮಾನಿಗಳ ಪ್ರಶ್ನೆ ಊಟ ಮತ್ತು ಡಯಟ್‍ಗೆ ಸಂಬಂಧಿಸಿತ್ತು. ನಿಮಗೆ ಯಾವ ರೀತಿಯ ಊಟ ಇಷ್ಟ ಎಂದಾಗ ರಮ್ಯಾ ಹೇಳಿದ್ದೇ ಬದನೆಕಾಯಿ, ನುಗ್ಗೆಕಾಯಿ ಕಥೆ. ರಮ್ಯಾಗೆ ನುಗ್ಗೆಕಾಯಿ ಇಷ್ಟ ಆಗಲ್ವಂತೆ. ಹಾಲೂ ಇಷ್ಟವಿಲ್ಲವಂತೆ. ಇಡ್ಲಿಯನ್ನ ಚಟ್ನಿ ಜೊತೆ ತಿನ್ನೋಕೆ ಇಷ್ಟ ಪಡೋ ರಮ್ಯಾಗೆ, ಸಾಂಬಾರ್ ಇಡ್ಲಿ ಇಷ್ಟವಾಗೋದಿಲ್ವಂತೆ. ಇದೆಲ್ಲದರ ಜೊತೆ ರಮ್ಯಾಗೆ ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಎಣ್ಣೆಗಾಯಿ ಸಖತ್ ಇಷ್ಟ. ಪ್ರಾಣ ಎಂದು ಹೇಳಿಕೊಂಡಿದ್ದಾರೆ ರಮ್ಯಾ.
ಕಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಲೈವ್‍ಗೆ ಬಂದಿದ್ದ ರಮ್ಯಾಗೆ ಮದುವೆ ಪ್ರಶ್ನೆ ಎಂದಿನಂತೆ ಎದುರಾಯ್ತು. ನೋ ಎಂದು ಖಂಡತುಂಡವಾಗಿ ಹೇಳಿದ ರಮ್ಯಾ, ಗೆಳೆಯರು, ಬಂಧುಗಳ ಮದುವೆಗೂ ಹೋಗಲ್ವಂತೆ.