` ಸುಳ್ ಸುದ್ದಿ ವೀರರಿಗೆ ವಿನೋದ್ ಪ್ರಭಾಕರ್ ಹೇಳಿದ್ದೇನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸುಳ್ ಸುದ್ದಿ ವೀರರಿಗೆ ವಿನೋದ್ ಪ್ರಭಾಕರ್ ಹೇಳಿದ್ದೇನು?
Vinod Prabhakar

ಅದ್ಯಾರೋ ಏನೋ ಗೊತ್ತಿಲ್ಲ. ರಾಬರ್ಟ್ ಚಿತ್ರ ಹಿಟ್ ಆದ್ಮೇಲೆ ಒಂದಿಷ್ಟು ಜನ ನನಗೇ ಗೊತ್ತಿಲ್ಲದೆ ನನ್ನ ಸಂಭಾವನೆ ಏರಿಸಿಬಿಟ್ಟಿದ್ದಾರೆ. ಒಂದು ಕೋಟಿ ಕೇಳ್ತೀನಂತೆ. ದುರಹಂಕಾರ ಮಾಡ್ತಿದೀನಂತೆ. ಅದ್ಯಾರೋ ಏನೋ.. ದಯವಿಟ್ಟು ನನ್ನ ಹೊಟ್ಟೆ ಮೇಲೆ ಹೊಡೀಬೇಡಿ ಎಂದು ಮನವಿ ಮಾಡಿದ್ದಾರೆ ವಿನೋದ್ ಪ್ರಭಾಕರ್.

ಇತ್ತೀಚೆಗೆ ತಮ್ಮ ವರದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್ ನನಗೆ ಕಥೆ ಮತ್ತು ಮೇಕಿಂಗ್ ಮುಖ್ಯ. ನನ್ನ ಯೋಗ್ಯತೆ ನನಗೆ ಗೊತ್ತಿದೆ. ನನ್ನ ಚಿತ್ರ ಎಷ್ಟು ದುಡಿಯುತ್ತೆ ಅನ್ನೋ ಅಂದಾಜೂ ನನಗೆ ಇದೆ. ಚಿತ್ರಮಂದಿರ, ಸ್ಯಾಟಲೈಟ್ ಮತ್ತು ಡಬ್ಬಿಂಗ್ ರೈಟ್ಸ್ ಬಗ್ಗೆಯೂ ಗೊತ್ತಿದೆ. ಹೀಗಾಗಿ ಬಜೆಟ್ ದಾಟದಂತೆ ಎಚ್ಚರಿಕೆ ವಹಿಸುತ್ತೇನೆ. ಇದರ ಮಧ್ಯೆ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಾರೆ. ದಯವಿಟ್ಟು  ನನ್ನ ಅನ್ನ ಕಿತ್ತುಕೊಳ್ಳಬೇಡಿ ಎಂದು ಕೇಳಿಕೊಂಡಿದ್ದಾರೆ ವಿನೋದ್ ಪ್ರಭಾಕರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery