ಇದು ಇನ್ನೊಂದು.. ದಿನಾಂಕ ಹನ್ನೊಂದು.. 11ನೇ ದಿನ 10ನೇ ಸಿನಿಮಾ. ಒಂದರ ಹಿಂದೆ ಮತ್ತೊಂದರಂತೆ ಸಿನಿಮಾ ಘೋಷಿಸುತ್ತಿರುವ ಹೊಂಬಾಳೆ ಫಿಲಮ್ಸ್ ಸದ್ಯಕ್ಕೆ ದೇಶದ ಪ್ರತಿಷ್ಠಿತ ಸಿನಿಮಾ ಬ್ಯಾನರ್‍ಗಳಲ್ಲಿ ಒಂದು. 2014ರಲ್ಲಿ ನಿನ್ನಿಂದಲೇ ಚಿತ್ರದಿಂದ ಶುರುವಾದ ಹೊಂಬಾಳೆ ಫಿಲಮ್ಸ್‍ನ ಖ್ಯಾತಿ ಉತ್ತುಂಗಕ್ಕೇರಿದ್ದು ರಾಜಕುಮಾರ ಚಿತ್ರದ ನಂತರ. ಕೆಜಿಎಫ್ ನಂತರವಂತೂ ಎವರೆಸ್ಟ್ ಏರಿ ಕುಳಿತ ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡಿದೆ ಹೊಂಬಾಳೆ.
ಈಗ ಹೊಂಬಾಳೆ ಕೆಜಿಎಫ್ ಚಾಪ್ಟರ್-2 ಚಿತ್ರದ ಶೂಟಿಂಗ್ ಮುಗಿಸಿ ರಿಲೀಸ್ ಮಾಡೋದು ಯಾವಾಗ ಅನ್ನೋ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಕೆಜಿಎಫ್ ನೀಲ್ ಮತ್ತು ಪ್ರಭಾಸ್ ಜೊತೆ ಸಲಾರ್ ಮತ್ತು ನೀಲ್ ಮತ್ತು ಶ್ರೀಮುರಳಿ ಜೊತೆ ಬಘೀರ ಚಿತ್ರಗಳ ಲಾಂಚ್ ಘೋಷಿಸಿದೆ. ಪುನೀತ್ ಜೊತೆ ಯುವರತ್ನ ನಂತರ ದ್ವಿತ್ವ ಚಿತ್ರವನ್ನೂ ಘೋಷಣೆ ಮಾಡಿದೆ. ಈಗ 11ನೇ ತಾರೀಕು 12.51ಕ್ಕೆ ಹೊಂಬಾಳೆಯ 10ನೇ ಚಿತ್ರ ಘೋಷಣೆಯಾಗಲಿದೆ.
ಯಾವಾಗ ಅಲೆ ಸತ್ತವರನ್ನು ವಾಪಸ್ ತೆಗೆದುಕೊಂಡು ಬರುತ್ತದೋ.. ಆಗ ಕಡಲ ತೀರ ರಕ್ತಸಿಕ್ತವಾಗುತ್ತದೆ.. ಅನ್ನೋ ಲೈನ್ ಕೊಟ್ಟು ಪೋಸ್ಟರ್ ಹೊರಬಿಟ್ಟಿದೆ ಹೊಂಬಾಳೆ. ಹೀರೋ ಯಾರು? ಡೈರೆಕ್ಟರ್ ಯಾರು? ಕಥೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಜುಲೈ 11ರಂದು ಸಿಗಬಹುದು.