` ಚಿತ್ರಮಂದಿರ ಮಾಲೀಕರಿಗೆ ಸರ್ಕಾರದಿಂದ ರಿಲೀಫ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರಮಂದಿರ ಮಾಲೀಕರಿಗೆ ಸರ್ಕಾರದಿಂದ ರಿಲೀಫ್
ಚಿತ್ರಮಂದಿರ ಮಾಲೀಕರಿಗೆ ಸರ್ಕಾರದಿಂದ ರಿಲೀಫ್

ಚಿತ್ರಮಂದಿರಗಳಿಗೆ ಸರ್ಕಾರ ವಿಧಿಸುತ್ತಿರುವ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ರದ್ದು ಮಾಡಬೇಕು ಎಂದು ಚಲನಚಿತ್ರ ಪ್ರದರ್ಶಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆ ಮನವಿಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ಚಿತ್ರಮಂದಿರ ಮಾಲೀಕರ ಆಸ್ತಿ ತೆರಿಗೆಯನ್ನು ರದ್ದು ಮಾಡಿದೆ. ಇದು 2021-22 ಸಾಲಿಗೆ ಮಾತ್ರ ಅನ್ವಯ. 2020-21ಕ್ಕೂ ಅನ್ವಯವಾಗಲ್ಲ. ಮುಂದೆ ಬರುವ 2022-23ಕ್ಕೂ ಅನ್ವಯವಾಗಲ್ಲ ಅನ್ನೋದು ಸರ್ಕಾರದ ಸ್ಪಷ್ಟ ನುಡಿ.

ಅಷ್ಟೇ ಅಲ್ಲ, ಇದು ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಮಾತ್ರ ಅನ್ವಯ. ರಾಜ್ಯದಲ್ಲಿ 630 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿವೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಈ ಆಸ್ತಿ ತೆರಿಗೆಯಿಂದ ವಿನಾಯ್ತಿ ಇಲ್ಲ.

2020ರಲ್ಲಿ ಲಾಕ್ ಡೌನ್ ಶುರುವಾದಾಗಿನಿಂದಲೂ ಬಾಗಿಲು ಮುಚ್ಚಿರುವುದು ಚಿತ್ರಮಂದಿರಗಳು. ನಡುವಿನ 2 ತಿಂಗಳು ಬಿಟ್ಟರೆ ಉಳಿದೆಲ್ಲ ತಿಂಗಳೂ ಚಿತ್ರಮಂದಿರಗಳು ಬಾಗಿಲು ಹಾಕಿಯೇ ಇವೆ. ಹೀಗಾಗಿ ಚಿತ್ರಮಂದಿರ ಮಾಲೀಕರ ಕಷ್ಟಕ್ಕೆ ಸರ್ಕಾರ ಕೊನೆಗೂ ಕಣ್ಣು ಬಿಟ್ಟಿದೆ.

ಸರ್ಕಾರದ ನಿರ್ಧಾರವನ್ನು ಫಿಲಂ ಚೇಂಬರ್, ಪ್ರದರ್ಶಕರ ಸಂಘ ಸ್ವಾಗತಿಸಿವೆ.