ನಾಗಮಂಡಲ, ಸೂರ್ಯವಂಶ, ಹಬ್ಬ, ಜೋಡಿಹಕ್ಕಿ ಚಿತ್ರಗಳ ಖ್ಯಾತಿಯ ನಟಿ ವಿಜಯಲಕ್ಷ್ಮಿ ಇತ್ತೀಚೆಗೆ ವಿವಾದ ಮತ್ತು ಕಣ್ಣೀರಿನಿಂದಲೇ ಖ್ಯಾತರಾಗಿದ್ದಾರೆ. ಅದರ ಮುಂದುವರಿದ ಭಾಗ ಇದು. ನಟಿ ವಿಜಯಲಕ್ಷ್ಮಿ ಫೇಸ್ ಮಾಡಿದ ಮೊದಲ ವಿವಾದ ಜಗ್ಗೇಶ್ ಚಪ್ಪಲಿ ಪ್ರಸಂಗ. ವಿಜಯಲಕ್ಷ್ಮಿ ಜಗ್ಗೇಶ್ ಜೊತೆ ರಂಗಣ್ಣ ಮತ್ತು ಮಾತಿನ ಮಲ್ಲ ಎಂಬ ಎರಡು ಚಿತ್ರಗಳಲ್ಲಿ ನಾಯಕಿ. ಈ ಚಿತ್ರಗಳ ಶೂಟಿಂಗ್ ವೇಳೆ ಜಗ್ಗೇಶ್ ಅವರಿಗೆ ವಿಜಯಲಕ್ಷ್ಮಿ ಚಪ್ಪಲಿಯಲ್ಲಿ ಹೊಡೆದರು ಎನ್ನುವುದು ಆಗ ವಿವಾದವಾಗಿತ್ತು.
ನನಗೆ ಏನಾಗಿದೆ ಎನ್ನವುದು ಗೊತ್ತಾಗಲಿಲ್ಲ. ಯಾರು ಯಾರ ಬಳಿಯೋ ಕ್ಷಮೆ ಕೇಳಿದೆ. ಜಗ್ಗೇಶ್ ನಾನು ಮಾಡದ ತಪ್ಪನ್ನು ನನ್ನ ಮೇಲೆ ಹೊರಿಸಿದ್ದರು. ಜಗ್ಗೇಶ್ ಅವರಿಗೆ ನಾನು ಚಪ್ಪಲಿಯಲ್ಲಿ ಹೊಡೆದಿರಲಿಲ್ಲ. ಆಗ ನನ್ನನ್ನು ಆ ವಿವಾದದಿಂದ ರಕ್ಷಿಸಿದ್ದು ಪಾರ್ವತಮ್ಮ ರಾಜ್‍ಕುಮಾರ್ ಎಂದು ಹೇಳಿಕೊಂಡಿದ್ದಾರೆ ನಟಿ ವಿಜಯಲಕ್ಷ್ಮಿ.