sಸನ್ನಿ ಲಿಯೋನ್ ಅಂದ್ರೇನೇ ಹಾಟ್.. ಸೆನ್ಸೇಷನ್. ಅವರೀಗ ಮತ್ತೊಮ್ಮೆ ಸ್ಯಾಂಡಲ್‍ವುಡ್‍ಗೆ ಅದರಲ್ಲೂ ಕಾಟನ್`ಪೇಟೆಗೆ ಬರುತ್ತಿದ್ದಾರೆ. ಹಾಗಂಟ ಕಾಟನ್`ಪೇಟೆಯಲ್ಲಿ ಟೆಂಟ್ ಹಾಕಬೇಡಿ.
ಕಾಟನ್`ಪೇಟೆ ಅನ್ನೋದು ಚಿತ್ರದ ಹೆಸರು. ಶೂಟಿಂಗ್ ನಡೆಯೋದು ಹೈದರಾಬಾದಿನಲ್ಲಿ. ಜುಲೈ 29ರಿಂದ 30ರವರೆಗೆ ಶೂಟಿಂಗ್ ನಡೆಯಲಿದೆ. ಅದೊಂದು ಐಟಮ್ ಸಾಂಗ್`ಗೆ ಸನ್ನಿ 50 ಲಕ್ಷ ಸಂಭಾವನೆ ಪಡೆಯುತ್ತಾರಂತೆ.
ಕನಕಪುರ ಶ್ರೀನಿವಾಸ್ ನಿರ್ಮಾಣದ ಈ ಚಿತ್ರ ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್ ಅನ್ನೋ ಹೆಸರಲ್ಲಿ ಡಬ್ ಆಗಲಿದೆ.
ವಿ.ರಾಜ್‍ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದ ಈ ಹಾಡಿನಲ್ಲಿ ನಿರ್ಮಾಪಕ ಶ್ರೀನಿವಾಸ್ ಕೂಡಾ ಸನ್ನಿ ಜೊತೆ ಸ್ಪೆಪ್ ಹಾಕಲಿದ್ದಾರಂತೆ.