ಧ್ರುವ ಸರ್ಜಾರ ದುಬಾರಿ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಎ.ಪಿ.ಅರ್ಜುನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಸುದ್ದಿಯ ಬಗ್ಗೆ ಧ್ರುವ ಸರ್ಜಾ ಆಗಲೀ, ಎ.ಪಿ.ಅರ್ಜುನ್ ಆಗಲೀ ಅಥವಾ ನಿರ್ಮಾಪಕ ಉದಯ್ ಮೆಹ್ತಾ ಆಗಲೀ.. ಖಚಿತವಾಗಿ ಒಪ್ಪಿಕೊಂಡಿರಲಿಲ್ಲ. ಈಗದು ಅಧಿಕೃತವಾಗಿದೆ.
ಗವಿಪುರಂನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಧ್ರುವ ಸರ್ಜಾರನ್ನು ಹೀರೋ ಆಗಿ ಪರಿಚಯಿಸಿದ ಅದ್ಧೂರಿ ಅರ್ಜುನ್ ಡೈರೆಕ್ಟರ್. ನಿರ್ಮಾಪಕರಾಗಿ ಉದಯ್ ಮೆಹ್ತಾ ಅವರೇ ಇರುತ್ತಾರೆ.