ಹಾಗಂತ ಉಪೇಂದ್ರ ಅವರೇನೂ ನಿರ್ದೇಶನಕ್ಕಿಳಿದಿಲ್ಲ. ಅಭಿಮಾನಿಗಳು ಆಹಾ.. ಉಪ್ಪಿ ಡೈರೆಕ್ಷನ್ ಮಾಡ್ತಾವ್ರಂತೆ ಅಂತಾ ಥ್ರಿಲ್ ಆಗೋ ಅಗತ್ಯವೂ ಇಲ್ಲ. ಇದು ರಾಣ ಚಿತ್ರದ ಮುಹೂರ್ತದ ಸ್ಟೋರಿ.
ಶ್ರೇಯಸ್ ಮಂಜು ನಟಿಸುತ್ತಿರುವ ಹೊಸ ಚಿತ್ರ ರಾಣ. ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ನಂದಕಿಶೋರ್ ಡೈರೆಕ್ಷನ್`ನ ಈ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಪ್ರೊಡ್ಯೂಸರ್. ಮೊದಲ ಶಾಟ್‍ಗೆ ಆ್ಯಕ್ಷನ್ ಕಟ್ ಹೇಳಿ, ಚಿತ್ರಕ್ಕೆ ಶುಭ ಕೋರಿದ್ದು ರಿಯಲ್ ಸ್ಟಾರ್ ಉಪೇಂದ್ರ. ಕ್ಲಾಪ್ ಮಾಡಿದವರು ಗುಜ್ಜಲ್ ಪುರುಷೋತ್ತಮ್ ತಾಯಿ.
ಪಡ್ಡೆಹುಲಿ ಮಂಜುರ 2ನೇ ಚಿತ್ರಕ್ಕೇ ಇಬ್ಬರು ಹೀರೋಯಿನ್ಸ್. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್. ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಜೊತೆ ಕೆ.ಮಂಜು ಕೂಡಾ ಇದ್ದಾರೆ.