` ಮತ್ತೆ `ಗಾಳಿಪಟ' ಹಾರಿಸ್ತಿರೋ ಗಣೇಶ್ ಅವತಾರ `ಸಖತ್' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮತ್ತೆ `ಗಾಳಿಪಟ' ಹಾರಿಸ್ತಿರೋ ಗಣೇಶ್ ಅವತಾರ `ಸಖತ್'
ಮತ್ತೆ `ಗಾಳಿಪಟ' ಹಾರಿಸ್ತಿರೋ ಗಣೇಶ್ ಅವತಾರ `ಸಖತ್'

ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷವೂ ಹುಟ್ಟುಹಬ್ಬದ ದಿನ ಅಭಿಮಾನಿಗಳು ಮತ್ತು ಸಂಭ್ರಮವನ್ನು ದೂರವೇ ಇಟ್ಟರು. ಮೊದಲೇ ತಮ್ಮ ಫ್ಯಾನ್ಸ್‍ಗೆ ಮನವಿ ಮಾಡಿಕೊಂಡಿದ್ದ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಮನೆಮಂದಿ ಮತ್ತು ಮಕ್ಕಳ ಜೊತೆಗಷ್ಟೇ ಇಟ್ಟುಕೊಂಡರು. ಈ ಹುಟ್ಟುಹಬ್ಬಕ್ಕೆ ವಿಶೇಷ ಎನಿಸಿದ್ದು ಗಾಳಿಪಟ-2 ಮತ್ತು ಸಖತ್ ಚಿತ್ರದ ಪೋಸ್ಟರ್‍ಗಳು ಮಾತ್ರ.

ಸಖತ್ ಚಿತ್ರದಲ್ಲಿ ಗಣೇಶ್ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದು, ಹುಟ್ಟುಹಬ್ಬಕ್ಕಾಗಿ ಗಣೇಶ್ ಕಟಕಟೆಯಲ್ಲಿ ನಿಂತಿರುವ ಪೋಸ್ಟರ್‍ನ್ನು ಸಖತ್ ಚಿತ್ರತಂಡ ಹೊರಬಿಟ್ಟಿತು. ಗಾಳಿಪಟ 2 ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದರೆ, ತ್ರಿಬಲ್ ರೈಡಿಂಗ್ ಟೀಂ ಟೀಸರ್ ಹೊರಬಿಟ್ಟು ಶುಭ ಹಾರೈಸಿತು.