ಪಡ್ಡೆಹುಲಿ ಚಿತ್ರದ ನಂತರ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಟಿಸುತ್ತಿರುವ ಚಿತ್ರದ ಟೈಟಲ್ ಈಗ ರಿವೀಲ್ ಆಗಿದೆ. ಶ್ರೇಯಸ್ ಮಂಜು ನಟನೆಯ ಚಿತ್ರದ ಟೈಟಲ್ ರಾಣಾ.
ಪೊಗರು ನಂತರ ದುಬಾರಿ ನಿರ್ದೇಶಿಸಬೇಕಿದ್ದ ನಂದಕಿಶೋರ್, ಆ ಚಿತ್ರವನ್ನು ಕೈಬಿಟ್ಟು ಈಗ ರಾಣಾ ಕೈಗೆತ್ತಿಕೊಂಡಿದ್ದಾರೆ. ಜುಲೈ 7ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಅದಕ್ಕೂ ಮುನ್ನ ಚಿತ್ರದ ಟೈಟಲ್ ಹೊರಬಿಟ್ಟಿದ್ದಾರೆ ನಂದಕಿಶೋರ್.
ರಾಣಾ ಚಿತ್ರದ ಟೈಟಲ್ ನಿರ್ಮಾಪಕ ರಮೇಶ್ ಕಶ್ಯಪ್ ಬಳಿ ಇತ್ತಂತೆ. ಯಶ್ ನಟಿಸಬೇಕಿತ್ತು. ಆದರೆ, ಆ ಟೈಟಲ್‍ನ್ನು ಶ್ರೇಯಸ್ ಮಂಜು ಅವರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿಯೇ ನಿರ್ಮಾಪಕರಾದ ಪುರುಷೋತ್ತಮ ಗುಜ್ವಾಲ್, ಕೆ.ಮಂಜು ರಮೇಶ್ ಕಶ್ಯಪ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಶ್ರೇಯಸ್ ಮಂಜು ರಾಣಾಗೆ ಚಂದನ್ ಶೆಟ್ಟಿ ಸಂಗೀತವಿದೆ. ರೀಷ್ಮಾ ನಾಣಯ್ಯ ಹೀರೋಯಿನ್.