ಜಗ್ಗೇಶ್ ಅವರ 2ನೇ ಮಗ ಯತಿರಾಜ್ ಅವರ ಕಾರು ಅಪಘಾತಕ್ಕೀಡಾಗಿದೆ. ಚಿಕ್ಕಬಳ್ಳಾಪುರ ಸಮೀಪದ ಅಗಲಗುರ್ಕಿ ಬಳಿ ನಡೆದಿರೋ ಆಕ್ಸಿಡೆಂಟ್ ಇದು. ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಬಿಎಂಡಬ್ಲ್ಯು ಕಾರ್ ಆದ್ದಿರಂದ ಯತಿರಾಜ್ ಅವರಿಗೆ ಸಣ್ಣ ಗಾಯವೂ ಆಗಿಲ್ಲ. ಕಾರು ಗುದ್ದಿದ ರಭಸಕ್ಕೆ ರಸ್ತೆ ಪಕ್ಕದಲ್ಲಿದ್ದ ಮರವೊಂದು ಮುರಿದುಬಿದ್ದಿದೆ. ಆದರೆ, ಆಕ್ಚುಯಲಿ ನಡೆದಿದ್ದಾದರೂ ಏನು..?
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು, ಬೆಸ್ಕಾಂ ನೌಕರರ ಪ್ರಕಾರ ಯತಿರಾಜ್ ಅವರಿಗೆ ಅಡ್ಡಲಾಗಿ ದಿಢೀರ್ ಎಂದು ಒಬ್ಬ ಬೈಕ್ ಸವಾರ ಬಂದ. ಅವನು ಯು ಟರ್ನ್ ತೆಗೆದುಕೊಳ್ಳಲು ಹೋದ. ಸಡನ್ನಾಗಿ ಬಂದ ಅವನನ್ನು ರಕ್ಷಿಸಲು ಹೋದ ಯತಿರಾಜ್ ಅವರ ಕಾರು ಮೊದಲು ಡಿವೈಡರ್‍ಗೆ ಡಿಕ್ಕಿ ಹೊಡೆಯಿತು. ನಂತರ ಕಂಟ್ರೋಲ್ ತಪ್ಪಿ ರಸ್ತೆಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಯಿತು.
ಇದು ಬೆಳಗ್ಗೆ 11.30ರ ಸುಮಾರಿನಲ್ಲಿ ನಡೆದ ಘಟನೆ.
ಪೊಲೀಸರೂ ಇದೇ ಮಾತು ಹೇಳಿದ್ದಾರೆ. ಯತಿರಾಜ್ ಸೇಫಾಗಿದ್ದಾರೆ. ಅಪಘಾತ ಎಂದು ಸುದ್ದಿಯಾಗುತ್ತಿದ್ದಂತೆ ಯತಿರಾಜ್ ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ್ದಾರೆ ಎಂಬ ವದಂತಿಗಳು ಹಬ್ಬಿದವು. ಯತಿರಾಜ್ ಡ್ರಿಂಕ್ಸ್ ಮಾಡಿರಲಿಲ್ಲ. ಯಾವುದೇ ನಶೆಯಲ್ಲೂ ಇರಲಿಲ್ಲ ಎಂದು ಗೊತ್ತಾಗಿದೆ.