` 2 ಲಕ್ಷ ಸಬ್`ಸ್ಕ್ರೈಬರ್ಸ್ : ಚಿತ್ರಲೋಕ ದಾಖಲೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
2 ಲಕ್ಷ ಸಬ್`ಸ್ಕ್ರೈಬರ್ಸ್ : ಚಿತ್ರಲೋಕ ದಾಖಲೆ
2 ಲಕ್ಷ ಸಬ್`ಸ್ಕ್ರೈಬರ್ಸ್ : ಚಿತ್ರಲೋಕ ದಾಖಲೆ

ಕನ್ನಡದ ಮೊತ್ತಮೊದಲ ವೆಬ್ ಪೋರ್ಟಲ್, ಇತ್ತೀಚೆಗಷ್ಟೇ 22 ವರ್ಷದ ಸಂಭ್ರಮ ಆಚರಿಸಿಕೊಂಡ ಚಿತ್ರಲೋಕ ಡಾಟ್ ಕಾಮ್ ಇನ್ನೊಂದು ದಾಖಲೆ ಬರೆದಿದೆ. ಇಂಡಿಯಾದಲ್ಲಿ ಗೂಗಲ್ ಎಂಟ್ರಿ ಕೊಡುವುದಕ್ಕೂ ಮುನ್ನವೇ ಆರಂಭವಾದ ವೆಬ್ ಪೋರ್ಟಲ್ ಚಿತ್ರಲೋಕ.

ಯೂಟ್ಯೂಬ್‍ನಲ್ಲಿದ್ದರೂ ಆಕ್ಟಿವ್ ಆಗಿದ್ದು ತೀರಾ ಇತ್ತೀಚೆಗೆ. ಕಡಿಮೆ ಅವಧಿಯಲ್ಲಿಯೇ ಚಿತ್ರಲೋಕ ಯೂಟ್ಯೂಬ್‍ನಲ್ಲೂ ದಾಖಲೆ ಬರೆದಿದೆ.

ಚಿತ್ರಲೋಕ ಡಾಟ್ ಕಾಮ್ ಯೂಟ್ಯೂಬ್ ಚಾನೆಲ್ಲಿನಲ್ಲಿ ಡಾ.ರಾಜ್ ಅಪಹರಣದ,  ನಿಗೂಢವಾಗಿದ್ದ ಸಂಗತಿಗಳನ್ನು ಜನರ  ಮುಂದಿಟ್ಟ ಸರಣಿ ಸೂಪರ್ ಹಿಟ್ ಆಯಿತು. ಕನ್ನಡದ ಯಾವುದೇ ಮಾಧ್ಯಮವೂ ಟಚ್ ಮಾಡಲಾಗದ ಹಲವು ಕಥೆಗಳನ್ನು ಚಿತ್ರಲೋಕ ಕನ್ನಡಿಗರ ಮುಂದಿಟ್ಟಿತ್ತು. ರವಿಚಂದ್ರನ್, ವಿಷ್ಣುವರ್ಧನ್, ದ್ವಾರಕೀಶ್, ರೇಖಾದಾಸ್, ಚರಣ್ ರಾಜ್, ಸಾರಾ ಗೋವಿಂದು ಸೇರಿದಂತೆ ಹಿರಿಯ ಕಲಾವಿದರ ಕಥೆಗಳು, ನಿರ್ದೇಶಕರು, ನಿರ್ಮಾಪಕರ ಅನುಭವಗಳ ಸರಣಿ ಚಿತ್ರಲೋಕ ವೀಕ್ಷಕರಿಗೆ ಇಷ್ಟವಾದವು.

ಇಂತಹ ಇನ್ನೂ ಹತ್ತುಹಲವು ವಿಶೇಷ ಸಂಗತಿಗಳ ಸರಣಿ ಚಿತ್ರಲೋಕದಲ್ಲಿದೆ. ಹೆಚ್ಚೂ ಕಡಿಮೆ 30 ವರ್ಷಗಳ ಕಾಲ ಚಿತ್ರರಂಗದಲ್ಲಿ ವರದಿಗಾರರಾಗಿ, ನಿರ್ಮಾಪಕರೂ ಆಗಿ ಸಕ್ರಿಯರಾಗಿರುವ ಚಿತ್ರಲೋಕ ಸಂಪಾದಕ ಕೆ.ಎಂ.ವೀರೇಶ್ ಈ ನಿಟ್ಟಿನಲ್ಲಿ ಇನ್ನಷ್ಟು ವಿನೂತನ ಕಥೆ ಹೇಳಲಿದ್ದಾರೆ.

ಚಿತ್ರಲೋಕವನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಸಮಸ್ತ ಕನ್ನಡಿಗರಿಗೆ ಧನ್ಯವಾದಗಳು.