2021ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಸುದೀರ್ಘ ಅವಧಿಯ ಬಳಿಕ ಸಿನಿಮಾಗೆ ಧ್ವನಿ ನೀಡುತ್ತಿದ್ದೇನೆ. ಇದು ಹೊಸ ಅನುಭವದಂತೆ ಫೀಲ್ ಆಗುತ್ತಿದೆ. ಚಿತ್ರ ಅಂದುಕೊಂಡಂತೆಯೇ ಬರುತ್ತಿದೆ ಎನ್ನುವುದು ಖುಷಿಯ ವಿಚಾರ ಎಂದು ಡಬ್ಬಿಂಗ್ ಅನುಭವ ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್.
ಆಗಸ್ಟ್ 19ರಂದು ರಿಲೀಸ್ ಎಂದು ಘೋಷಿಸಿಕೊಂಡಿರುವ ವಿಕ್ರಾಂತ್ ರೋಣ, ಅದೇ ದಿನ ರಿಲೀಸ್ ಆಗುತ್ತದಾ..? ಇಲ್ಲವಾ..? ಎಂಬುದು ಗೊತ್ತಿಲ್ಲ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗುತ್ತಿದೆ. ನಿರೂಪ್ ಭಂಡಾರಿ, ನೀತೂ ಅಶೋಕ್ ನಟಿಸಿರುವ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕ. ಚಿತ್ರ 2ಡಿ ಮತ್ತು 3ಡಿ ವರ್ಷನ್‍ನಲ್ಲಿ ಬರಲಿದೆ.