ಕಬ್ಜ ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ. ಪೋಸ್ಟರ್ ನೋಡುತ್ತಿದ್ದರೆ, ಪಕ್ಕಾ ಹಾಲಿವುಡ್ ಸ್ಟೈಲ್ ನೆನಪಿಸುತ್ತಿದೆ. ಅಭಿಮಾನಿಗಳಂತೂ ಫುಲ್ ಫಿದಾ. ಉಪೇಂದ್ರ ಮತ್ತು ಸುದೀಪ್ ಅವರ ಸ್ಟೈಲಿಷ್ ಲುಕ್ ಹಾಗಿದೆ.
ಸಚಿವ ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಸ್ವತಃ ನಿರ್ದೇಶಕ ಆರ್.ಚಂದ್ರು. ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಮಾರ್ಕೆಟ್‍ಗಾಗಿಯೇ ನಿರ್ಮಾಣವಾಗುತ್ತಿರುವ ಚಿತ್ರ ಕಬ್ಜ. ಚಿತ್ರದಲ್ಲಿ ಖ್ಯಾತನಾಮರ ಸೈನ್ಯವೇ ಸೇರಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್, ತಮಿಳಿನ ಐ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ಅನೂಪ್ ರೇವಣ್ಣ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ಉಪ್ಪಿ ಕಿಚ್ಚ ಚಿತ್ರದಲ್ಲಿ ಸಾಥ್ ಕೊಡುತ್ತಿದ್ದಾರೆ.
ಸದ್ಯಕ್ಕೆ ಸೆನ್ಸೇಷನ್‍ನಲ್ಲಿರುವ ಕೆಜಿಎಫ್ 2, ವಿಕ್ರಾಂತ್ ರೋಣ, ತೆಲುಗಿನ ಪುಷ್ಪ, ಆರ್‍ಆರ್‍ಆರ್ ಚಿತ್ರಗಳ ಜೊತೆ ಕಬ್ಜ ಕೂಡಾ ಇದೆ ಎನ್ನುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಆರ್.ಚಂದ್ರು. ಚಿತ್ರಕ್ಕೆ ಇನ್ನೂ ನಾಯಕಿ ಫಿಕ್ಸ್ ಆಗಿಲ್ಲ. ಈಗಾಗಲೇ ದೊಡ್ಡ ದೊಡ್ಡ ಸಂಸ್ಥೆಗಳನ್ನು ಚಿತ್ರವನ್ನು ಕೊಳ್ಳುವುದಕ್ಕೆ ಮುಂದೆ ಬಂದಿವೆ.