ರಾಕಿಂಗ್ ಸ್ಟಾರ್ ಯಶ್ ಕೋವಿಡ್ ಸಂಕಷ್ಟದ ವೇಳೆ ಚಲನಚಿತ್ರ ಕಾರ್ಮಿಕರ ನೆರವಿಗೆ ದೊಡ್ಡ ಮಟ್ಟದಲ್ಲಿ ಧಾವಿಸಿದ್ದರು. ಮೂರೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರ ಖಾತೆಗೆ ತಲಾ 5 ಸಾವಿರ ರೂ. ಡೆಪಾಸಿಟ್ ಮಾಡಿ ಕಷ್ಟಕ್ಕೆ ಹೆಗಲು ಕೊಟ್ಟಿದ್ದರು. ತಮ್ಮ ಸ್ವಂತ ಹಣದಿಂದ 1 ಕೋಟಿ 80 ಲಕ್ಷ ಹಣ ಖರ್ಚು ಮಾಡಿದ್ದರು. ಈಗ ಬಾಲಿವುಡ್‍ನಲ್ಲಿ ನಟ ಸಲ್ಮಾನ್ ಖಾನ್ ಕೂಡಾ ಇದೇ ಹಾದಿ ಹಿಡಿದಿದ್ದಾರೆ.
ಬಾಲಿವುಡ್ ಕೂಡಾ ಸಂಕಷ್ಟದಲ್ಲಿದ್ದು, ಹಿಂದಿ ಚಿತ್ರರಂಗದ 25 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಸಲ್ಮಾನ್ ಸಹಾಯ ಹಸ್ತ ಚಾಚಿದ್ದಾರೆ. ಸುಮಾರು 25 ಸಾವಿರ ಕಾರ್ಮಿಕರ ಖಾತೆಗೆ ತಲಾ 1,500 ರೂ. ಹಾಕುವ ಮೂಲಕ ನೆರವಾಗಿದ್ದಾರೆ. ಇದಕ್ಕಾಗಿ ಸುಮಾರು ಮೂರೂವರೆ ಕೋಟಿ ಹಣ ಖರ್ಚಾಗಿದೆ ಎನ್ನಲಾಗಿದೆ.