` ದಯವಿಟ್ಟು ಸಹಾಯ ಮಾಡಿ : ಅವಳೇ ನನ್ನ ಹೆಂಡ್ತಿ ನಿರ್ದೇಶಕನ ಕಣ್ಣೀರ ಕಥೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ದಯವಿಟ್ಟು ಸಹಾಯ ಮಾಡಿ : ಅವಳೇ ನನ್ನ ಹೆಂಡ್ತಿ ನಿರ್ದೇಶಕನ ಕಣ್ಣೀರ ಕಥೆ
S Umesh

ಅವಳೇ ನನ್ನ ಹೆಂಡ್ತಿ, ತುಂಬಿದ ಮನೆಯಂತಾ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಎಸ್.ಉಮೇಶ್. ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೈತುಂಬಾ ಕೆಲಸ, ಹಣ ಇದ್ದ ಕಾಲದಲ್ಲಿ ಕಷ್ಟದಲ್ಲಿದ್ದವರಿಗೆ ಸ್ವತಃ ನೆರವು ನೀಡಿದ್ದ ಉಮೇಶ್, ಈಗ ತಾವೇ ಸಹಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿಗೆ ಬಂದಿದ್ದಾರೆ.

ಎಸ್.ಉಮೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 1973ರಲ್ಲಿ. ಸಂಕಲನಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಉಮೇಶ್, ಅವಳೇ ನನ್ನ ಹೆಂಡ್ತಿ ಚಿತ್ರದ ಮೂಲಕ ನಿರ್ದೇಶಕರಾದರು. ಮೊದಲ ಚಿತ್ರವೇ ಸೂಪರ್ ಹಿಟ್. ಆ ಚಿತ್ರವನ್ನು ತೆಲುಗು, ತಮಿಳಿಗೂ ನಿರ್ದೇಶಿಸಿದ ಉಮೇಶ್‍ಗೆ ಕನ್ನಡದ ಪ್ರೇಮ ಹೋಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದು ಬನ್ನಿ ಒಂದ್ಸಲ ನೋಡಿ ಅನ್ನೋ ಚಿತ್ರವನ್ನು ನಿರ್ದೇಶನ ಮಾಡಿದರು. ವಿನೋದ್ ರಾಜ್ ನಾಯಕತ್ವದ ಚಿತ್ರ ದಯನೀಯ ಸೋಲು ಕಾಣುವುದರೊಂದಿಗೆ ಉಮೇಶ್ ಅವರ ವೃತ್ತಿ ಜೀವನ ದಾರಿ ತಪ್ಪಿತು. ಆಗಿನ ಕಾಲಕ್ಕೇ 7 ಲಕ್ಷ ಸಾಲ ಹೊತ್ತುಕೊಂಡ ಉಮೇಶ್ ಅವರಿಗೆ ನಂತರ ವಿಧಿ ಕೈ ಹಿಡಿಯಲಿಲ್ಲ. ತುಂಬಿದ ಮನೆಯಂತಾ ಸೂಪರ್ ಹಿಟ್ ಚಿತ್ರ ಕೊಟ್ಟರೂ, ಹೊಸಬರ ಅಲೆಯಲ್ಲಿ ಉಮೇಶ್ ಕೊಚ್ಚಿ ಹೋದರು.

ಹೊಸಬರಿಂದಾಗಿ ಅವಕಾಶ ಕೈತಪ್ಪಿದವು. ಆದರೆ, ಅದಕ್ಕೆ ನಾನು ಯಾರನ್ನೂ ದೂರುವುದಿಲ್ಲ. ಸರಿಯಾಗಿ ಯೋಜನೆ ಮಾಡಿ ಬದುಕು ಕಟ್ಟಿಕೊಳ್ಳಬೇಕಿತ್ತು. ಎಡವಿದೆ. ಕಳೆದ ವರ್ಷದ ಲಾಕ್‍ಡೌನ್‍ನಲ್ಲಿ ನನ್ನ ಒಂದು ಕಿಡ್ನಿ ವಿಫಲವಾಯಿತು. ಡಯಾಲಿಸಿಸ್ ಇಲ್ಲದೆಯೇ ಚಿಕಿತ್ಸೆಯನ್ನೇನೋ ಪಡೆದುಕೊಂಡೆ. ಆದರೆ ಈಗ ಆಗುತ್ತಿಲ್ಲ. ಇರುವ ಇನ್ನೊಂದು ಕಿಡ್ನಿ ಯಾವಾಗ ನಿಷ್ಕ್ರಿಯವಾಗುತ್ತೋ ಗೊತ್ತಿಲ್ಲ. ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವಂತಾಗಿದೆ ಎಂದಿರುವ ಉಮೇಶ್ ಅವರಿಗೆ ಮಗನ ಸ್ಕೂಲ್ ಫೀಸ್ ಕಟ್ಟೋಕೂ ಹಣವಿಲ್ಲ. ವಾರಕ್ಕೆ 2 ಇಂಜಕ್ಷನ್ ಬೇಕು. ಒಂದು ಇಂಜಕ್ಷನ್‍ಗೆ 2600 ರೂ. ಅಂದರೆ ವಾರಕ್ಕೆ 5200 ರೂ. ಒಟ್ಟಿನಲ್ಲಿ ತಿಂಗಳಿಗೆ ಕನಿಷ್ಠ 40 ಸಾವಿರ ಆಸ್ಪತ್ರೆ ವೆಚ್ಚಕ್ಕೇ ಬೇಕು. ಆದರೆ ಆಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟ ಮೇಲೆ ನೆರವಿಗೆ ಅಂಗಲಾಚಿದ್ದಾರೆ ಉಮೇಶ್.

ಆಸಕ್ತರು ಉಮೇಶ್ ಅವರ ಈ ಖಾತೆಗೆ ಹಣ ನೀಡಬಹುದು.

Canara bank, A/c no.2513101010498

Kamakya complex, BSK 3rd stage, B,lore 560058, IFSC CODE: CNRB OOO2513

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery