Print 
yash, lahari velu,

User Rating: 5 / 5

Star activeStar activeStar activeStar activeStar active
 
ಯಶ್ ಸ್ಫೂರ್ತಿ : ಸಂಗೀತ ಕಲಾವಿದರಿಗೆ ಮಿಡಿದ ಲಹರಿ ವೇಲು
Yash, Lahari Velu

ಲಹರಿ. ಈಗ ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಭಾಷೆಗಳಲ್ಲೇ ದೊಡ್ಡ ಹೆಸರು ಮಾಡಿರುವ ಮ್ಯೂಸಿಕಲ್ ಸಂಸ್ಥೆ. ಲಹರಿ ಆಡಿಯೋ ಕಂಪೆನಿ ಇದೀಗ ಸಂಗೀತ ಕಲಾವಿದರ ಕಷ್ಟಕ್ಕೆ ಕೈ ಚಾಚಿದೆ. ಕರ್ನಾಟಕ ಫಿಲ್ಮ್ ಮ್ಯೂಸಿಷಿಯನ್ಸ್ ಅಸೋಸಿಯೇಷನ್‍ಗೆ 10 ಲಕ್ಷ ರೂ. ದೇಣಿಗೆ ನೀಡಿದೆ. ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಈ ಹಣ ಬಳಸಿಕೊಳ್ಳಲು ಮನವಿ ಮಾಡಿದೆ.

ನಟ ಯಶ್ ಅವರು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ನೆರವು ನೀಡಿದ್ದೇ ತಮ್ಮ ಈ ಕಾರ್ಯಕ್ಕೆ ಪ್ರೇರಣೆ ಎಂದಿದ್ದಾರೆ ಲಹರಿ ವೇಲು. ನೀವು ನೀಡಿರುವ ಹಣವನ್ನು ಅಶಕ್ತ ಕಲಾವಿದರ ಸಹಾಯಕ್ಕೆ ವಿನಿಯೋಗಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಸಾಧುಕೋಕಿಲ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮವಿಶ್ ತಿಳಿಸಿದ್ದಾರೆ. ಲಹರಿ ವೇಲು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.