ಕೊರೊನಾ ಶಾಕ್‍ನಲ್ಲಿ ಚಿತ್ರರಂಗ ಈ ವರ್ಷ 47 ಮಂದಿಯನ್ನು ಕಳೆದುಕೊಂಡಿದೆ. ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು.. ಹೀಗೆ ಪ್ರತಿ ವಿಭಾಗದಲ್ಲೂ ಸಾವಿನದ್ದೇ ಅಟ್ಟಹಾಸ. ಹೀಗೆ ಮೃತಪಟ್ಟ ಎಲ್ಲರಿಗೂ ಫಿಲಂ ಚೇಂಬರ್ ಸಾಮೂಹಿಕವಾಗಿ ಶ್ರದ್ಧಾಂಜಲಿ ಸಲ್ಲಿಸಿದೆ.
ಚೇಂಬರ್ ಪಕ್ಕದಲ್ಲಿರುವ ಗಂಗರಾಜ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವರಾಜ್ ಕುಮಾರ್, ತಾರಾ, ಜಯಮಾಲಾ.. ಆದಿಯಾಗಿ ಎಲ್ಲರೂ ಪಾಲ್ಗೊಂಡು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.