ಭಾರತೀಯ ಕ್ರಿಕೆಟ್ ಕಂಡ ಅದ್ಭುತ ಆಟಗಾರ. ಟೀಂ ಇಂಡಿಯಾದ ಆಧಾರ ಸ್ತಂಭವಾಗಿ, ನಾಯಕನಾಗಿ, ಎನ್‍ಸಿಎ ಅಧ್ಯಕ್ಷರಾಗಿ, ಈಗ ಕೋಚ್ ಆಗುತ್ತಿರುವ ದ್ರಾವಿಡ್, ತೆಂಡೂಲ್ಕರ್ ಸರಿ ಸಮಾನಕ್ಕೆ ನಿಲ್ಲುವ ಆಟಗಾರ. ಜೆಂಟಲ್‍ಮನ್ ಕ್ರಿಕೆಟರ್. ಈಗ ದ್ರಾವಿಡ್ ಅವರ ಜೀವನ ಕಥೆಯನ್ನು ಸಿನಿಮಾ ಮಾಡಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ದ್ರಾವಿಡ್ ಬಯೋಪಿಕ್ ಮಾಡುತ್ತಿರುವುದು ತೆಲುಗು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎನ್ನಲಾಗಿದೆ. ಯಾರು ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಇದೆ. ಚಿತ್ರಕ್ಕೆ ದ್ರಾವಿಡ್ ಓಕೆ ಎಂದಿದ್ದಾರಂತೆ. ದ್ರಾವಿಡ್ ಪಾತ್ರದಲ್ಲಿ ತಮಿಳು ನಟ ಸಿದ್ಧಾರ್ಥ ಕೂಡಾ ಯೆಸ್ ಎಂದಿದ್ದಾರಂತೆ. ಸದ್ಯಕ್ಕೆ ಎಲ್ಲವೂ ಅಂತೆ ಕಂತೆಗಳೇ. ಅಧಿಕೃತ ಸುದ್ದಿ ಇನ್ನೂ ಬರಬೇಕಿದೆ.