ಕೆಜಿಎಫ್ ಚಾಪ್ಟರ್ 2 ನಂತರ ಮಫ್ತಿ ನರ್ತನ್ ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನುವುದು ಹೊಸ ಸುದ್ದಿಯೇನಲ್ಲ. ಯಶ್ ಅಧಿಕೃತವಾಗಿ ಹೇಳದೇ ಇದ್ದರೂ, ನರ್ತನ್ ಹೇಳಿಕೊಂಡಿದ್ದಾರೆ. ಈಗ ಕಥೆಯ ಒಂದು ಸೀಕ್ರೆಟ್ ಹೊರಬಿದ್ದಿದೆ.
ನರ್ತನ್ ಚಿತ್ರದಲ್ಲಿ ಯಶ್ ನೌಕಾಪಡೆ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರಂತೆ. ಕೋಪಿಷ್ಠ ವ್ಯಕ್ತಿಯೊಬ್ಬ ನೌಕಾಪಡೆಯ ಉನ್ನತ ಅಧಿಕಾರಿಯಾಗಿ ಎದುರಿಸುವ ಸವಾಲುಗಳ ಸುತ್ತ ಕಥೆ ಸಿದ್ಧವಾಗಿದೆಯಂತೆ. ಆ್ಯಂಗ್ರಿ ಯಂಗ್ ಮ್ಯಾನ್ & ನೇವಿ ಆಫೀಸರ್ ಕಥೆ ಎಂದ ಕೂಡಲೇ ಅದೊಂದು ಯುನಿವರ್ಸಲ್ ಸಬ್ಜೆಕ್ಟ್ ಎಂದು ಅರ್ಥವಾಗುತ್ತಿದೆ. ಸ್ಸೋ.. ಯಶ್ ಮುಂದಿನ ಚಿತ್ರವೂ ಅದ್ಧೂರಿಯಾಗಿ, ದೇಶಾದ್ಯಂತ ಸದ್ದು ಮಾಡಲಿದೆ ಎನ್ನುವ ನಿರೀಕ್ಷೆಗೆ ರೆಕ್ಕೆ ಪುಕ್ಕ ಸಿಕ್ಕಿದೆ. ವೇಯ್ಟ್.. ಎಲ್ಲವೂ ನಿರ್ಧಾರವಾಗೋದು, ಅಧಿಕೃತವಾಗೋದು ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ಮೇಲೆಯೇ.