ದೇಶದಲ್ಲೇ ಮೊದಲನೆಯದಾಗಿ ಪಂಜಾಬ್ ಸರ್ಕಾರ ಮಾಲ್ & ಮಲ್ಟಿಪ್ಲೆಕ್ಸ್ ಓಪನ್ ಮಾಡಿದೆ. ದೆಹಲಿ ನಂತರದ ಹಾದಿಯಲ್ಲಿದೆ. ಆದರೆ, 50% ಮಾತ್ರ ಓಪನ್. ಈಗ ಕರ್ನಾಟಕದಲ್ಲೂ ಮಾಲ್‍ಗಳು ಜೂನ್ 21ರಿಂದ ಓಪನ್ ಆಗುವ ಸಾಧ್ಯತೆಗಳು ಗೋಚರಿಸಿವೆ.
ಕರ್ನಾಟಕದ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಜೂನ್ 21ರಿಂದ ಮಾಲ್‍ಗಳನ್ನು ತೆರೆಯಲು ಅವಕಾಶ ನೀಡುವಂತೆ ಸಲಹೆ ನೀಡಿದೆ. ಆದರೆ ನಿರ್ಬಂಧಗಳಿರಲಿ ಎಂದೂ ಕೂಡಾ ಸೇರಿಸಿದೆ. ಸ್ಸೋ.. ಸದ್ಯಕ್ಕೆ ಮಾಲ್‍ಗಳು ಓಪನ್ ಆದರೂ ಥಿಯೇಟರುಗಳು ಮತ್ತು ಮಲ್ಟಿಪ್ಲೆಕ್ಸುಗಳು ಓಪನ್ ಆಗಲ್ಲ.
30ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗೋಕೆ ರೆಡಿಯಿವೆ. ಆದರೆ, 3ನೇ ಅಲೆ ಭೀತಿಯೂ ಇದೆ. ಹೀಗಾಗಿ ಯಾವ ಕ್ಷಣದಲ್ಲಿ ಮತ್ತೆ ಲಾಕ್ ಎನ್ನುತ್ತಾರೋ ಅನ್ನೋ ಭಯವಿರುವ ಕಾರಣ, ಮಲ್ಟಿಪ್ಲೆಕ್ಸ್ ಓಪನ್ ಆದರೂ ಸಿನಿಮಾದವರೇ ಸಿನಿಮಾ ರಿಲೀಸ್ ಮಾಡೋದು ಕಷ್ಟ. ಒಟ್ಟಿನಲ್ಲಿ 2020ರಲ್ಲಿ ಶುರುವಾದ ಟೆನ್ಷನ್, 2021ರಲ್ಲೂ ಕಂಟಿನ್ಯೂ ಆಗಲಿದೆ.