ದಾನಿಷ್ ಸೇಟ್. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಿತವಾದ ನಟ. ಆರ್‍ಸಿಬಿ ಇನ್‍ಸೈಡರ್ ಮೂಲಕ ಆರ್‍ಸಿಬಿ ಫ್ಯಾನ್ಸ್‍ಗೂ ಚಿರಪರಿಚಿತ. ಆರ್‍ಜೆಯಾಗಿಯೂ ಖ್ಯಾತರಾಗಿರುವ ದಾನಿಷ್ ಸೇಟ್, ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಅವರನ್ನು ವಿವಾಹವಾಗಿದ್ದಾರೆ. ಕೋವಿಡ್ 19 ರೂಲ್ಸ್ ಕಾರಣ ಮದುವೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು.