` ಮೈಸೂರು ಸಿಂಧೂರಿಯ ಮಂಡ್ಯ ಸ್ಟೋರಿಯೇ ಭಾರತ ಸಿಂಧೂರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮೈಸೂರು ಸಿಂಧೂರಿಯ ಮಂಡ್ಯ ಸ್ಟೋರಿಯೇ ಭಾರತ ಸಿಂಧೂರಿ
Rohini Sindhuri

ರಾಜ್ಯದಲ್ಲೀಗ ಸಂಚಲನ ಸೃಷ್ಟಿಸಿರುವ, ಸುದ್ದಿಯಲ್ಲಿರುವ ಅತಿ ದೊಡ್ಡ ಹೆಸರು ರೋಹಿಣಿ ಸಿಂಧೂರಿಯವರದ್ದು. ಅವರ ಹೆಸರಿನಲ್ಲೀಗ ಸಿನಿಮಾ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ಭಾರತ ಸಿಂಧೂರಿ.

ರೋಹಿಣಿ ಸಿಂಧೂರಿ ಈ ಹಿಂದೆ ಮಂಡ್ಯ ಡಿಸಿಯಾಗಿದ್ದವರು. ಮಂಡ್ಯ, ಹಾಸನ, ಮೈಸೂರು.. ಹೀಗೆ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇತ್ತೀಚೆಗೆ ಮೈಸೂರಿನಲ್ಲಿ ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದಾರೆ. ಸಿಂಧೂರಿ ಅವರ ಕಾರ್ಯವೈಖರಿಗೆ ಚಿತ್ರ ನಟಿ ಮತ್ತು ಮಂಡ್ಯದ ಮಾಜಿ ಸಂಸದೆ ರಮ್ಯಾ ಕೂಡಾ ಶಹಬ್ಬಾಸ್ ಹೇಳಿದ್ದಾರೆ.

ರೋಹಿಣಿ ಸಿಂಧೂರಿ ಪಾತ್ರ ಮಾಡಲು ನಾನು ರೆಡಿ ಎಂದಿದ್ದಾರೆ ಅಕ್ಷತಾ ಪಾಂಡವಪುರ. ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಥೆ ಈ ಸಿನಿಮಾಗೆ ಸಿದ್ಧತೆಯನ್ನೂ ಆರಂಭಿಸಿದೆ. ಕೃಷ್ಣ ಸ್ವರ್ಣಸಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ. ಅವರೇ ಚಿತ್ರದ ನಿರ್ಮಾಪಕರೂ ಕೂಡಾ.

ರೋಹಿಣಿ ಮಂಡ್ಯ ಡಿಸಿಯಾಗಿದ್ದಾಗ ಸ್ವಚ್ಛ ಭಾರತ್ ಮಿಷನ್ ಅಡಿಯಲಿಲ ಸಾಧನೆ ಮಾಡಿದ್ದರು. ನರೇಂದ್ರ ಮೋದಿಯವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಅದೇ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಮೈಸೂರಿನಲ್ಲಿ ನಡೆದ ರೋಹಿಣಿ ಮತ್ತು ಶಿಲ್ಪಾ ನಾಗ್ ಗಲಾಟೆ ಚಿತ್ರದಲ್ಲಿ ಇರೋದಿಲ್ಲ. ಸಿನಿಮಾಗೆ ಸ್ವತಃ ರೋಹಿಣಿ ಸಿಂಧೂರಿ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ ಕೃಷ್ಣ ಸ್ವರ್ಣಸಂದ್ರ. ಚಿತ್ರದಲ್ಲಿ ಅಂಬರೀಷ್ ಪಾತ್ರವೂ ಇರಲಿದೆಯಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery