` ದರ್ಶನ್ ಮ್ಯಾಜಿಕ್ : ಮೃಗಾಯಲಕ್ಕೆ ಹರಿದು ಬಂದ ದೇಣಿಗೆ ಎಷ್ಟು ಕೋಟಿ? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ದರ್ಶನ್ ಮ್ಯಾಜಿಕ್ : ಮೃಗಾಯಲಕ್ಕೆ ಹರಿದು ಬಂದ ದೇಣಿಗೆ ಎಷ್ಟು ಕೋಟಿ?
Darshan Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ಕರೆ ಮ್ಯಾಜಿಕ್‍ನ್ನೇ ಮಾಡಿಬಿಟ್ಟಿದೆ. ಮೃಗಾಲಯಗಳಲ್ಲಿ ದತ್ತು ತೆಗೆದುಕೊಳ್ಳುವವರೇ ಇಲ್ಲದೆ, ಆರೈಕೆ ಮಾಡಲು ಹಣವೂ ಇಲ್ಲದೆ ಪರದಾಡುತ್ತಿದ್ದ ಮೃಗಾಲಯದ ಸಿಬ್ಬಂದಿಗೆ ದರ್ಶನ್ ಕರೆ ಸಂಜೀವಿನಿಯನ್ನೇ ನೀಡಿದೆ. ನೂರಾರು ಪ್ರಾಣಿಗಳಿಗೆ ದತ್ತು ಪಡೆದುಕೊಳ್ಳುವವರು ದೊಡ್ಡ ಮಟ್ಟದಲ್ಲಿಯೇ ಸಿಕ್ಕಿದ್ದಾರೆ. ದರ್ಶನ್ ಕರೆ ಕೊಟ್ಟ ದಿನದಿಂದ ಇದುವರೆಗೆ ದೇಣಿಗೆ ನೀಡಿದವರ ಸಂಖ್ಯೆ ನೂರಾರು.

ಜೂನ್ 5ರಂದು ದರ್ಶನ್ ಕರೆ ಕೊಟ್ಟರು. ಅದೇ ದಿನ ಸಂಗ್ರಹವಾದ ಹಣ 8.65 ಲಕ್ಷ.

ಜೂನ್ 6ರಂದು 22.83 ಲಕ್ಷ ದೇಣಿಗೆ ಸಂಗ್ರಹವಾದರೆ, ಜೂನ್ 7ರಂದು 19.86 ಲಕ್ಷ ಹಣ ಸಂಗ್ರಹವಾಯಿತು. ಜೂನ್ 8ರಂದು 18.98 ಲಕ್ಷ ಹಣ ಸಂಗ್ರಹವಾಗಿದ್ದು, ಕೇವಲ 4 ದಿನದಲ್ಲಿ ರಾಜ್ಯದ 9 ಮೃಗಾಲಯಗಳಿಗೆ ಒಟ್ಟು 70.33 ಲಕ್ಷ ಹಣ ದೇಣಿಗೆ ಬಂತು.

ಮೈಸೂರು ಝೂಗೆ 38 ಲಕ್ಷಕ್ಕೂ ಹೆಚ್ಚು ಹಣ ಬಂದಿತ್ತು, ನಂ.1 ಸ್ಥಾನದಲ್ಲಿದೆ.  ಬೆಂಗಳೂರಿನ ಬನ್ನೇರುಘಟ್ಟ ಝೂನಲ್ಲಿ 28.83 ಲಕ್ಷ ಸಂಗ್ರಹವಾಗಿದ್ದರೆ, ಶಿವಮೊಗ್ಗ ಝೂ 3.44 ಲಕ್ಷ ಹಣ ಸಂಗ್ರಹಿಸಿದೆ. ಹಂಪಿ ಝೂ 1.66 ಲಕ್ಷ, ದಾವಣಗೆರೆ ಝೂ 1.41 ಲಕ್ಷ, ಬೆಳಗಾವಿ ಝೂ 1.45 ಲಕ್ಷ, ಗದಗ ಝೂ 1.1 ಲಕ್ಷ, ಕಲ್ಬುರ್ಗಿ ಝೂ 1.37 ಲಕ್ಷ, ಚಿತ್ರದುರ್ಗ ಝೂನಲ್ಲಿ 98 ಸಾವಿರ ಹಣ ಸಂಗ್ರಹವಾಗಿದೆ. ಒಟ್ಟಾರೆ 3548 ಜನ ದರ್ಶನ್ ಫ್ಯಾನ್ಸ್ ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ಇದು ಜೂನ್ 8ರವರೆಗಿನ ಲೆಕ್ಕ ಮಾತ್ರ. ಜೂನ್ 9ರ ಲೆಕ್ಕ ಬಂದಿಲ್ಲ. ಒಟ್ಟಿನಲ್ಲಿ ದರ್ಶನ್ ಅವರ ಒಂದು ಕರೆ ನೂರಾರು ಪ್ರಾಣಿಗಳ ಪಾಲಿಗೆ ಸಂಜೀವಿನಿಯಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery