ಟಿ.ಎಸ್.ನಾಗಾಭರಣ. ಕನ್ನಡ ಚಿತ್ರರಂಗದ ಸಂವೇದನಾಶೀಲ ನಿರ್ದೇಶಕ. ತಮ್ಮ ಚಿತ್ರಗಳಲ್ಲಿ ಮೌಲ್ಯಗಳನ್ನು ಪ್ರತಿಪಾದಿಸುವ ಡೈರೆಕ್ಟರ್. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿರುವ ನಾಗಾಭರಣ ಸದ್ಯಕ್ಕೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಆದರೆ, ಅವರ ಪುತ್ರ ಪನ್ನಗಾಭರಣ ಮಾತ್ರ ಹಿಂಗ್ಯಾಕೆ?
ಈ ಪ್ರಶ್ನೆ ಏಳೋಕೆ ಕಾರಣ ಇತ್ತೀಚೆಗೆ ಚಿರು ಸರ್ಜಾ ಅವರ ಪುಣ್ಯತಿಥಿ ಇತ್ತು. ಆ ದಿನ ಸಮಾಧಿಗೆ ತೆರಳಿ ಅವರ ಕುಟುಂಬಸ್ಥರೆಲ್ಲ ಪೂಜೆ ಸಲ್ಲಿಸಿದ್ದರು. ಕೋವಿಡ್ ನಿಯಮಗಳ ಪ್ರಕಾರ ಅವರು ಹೋಗುವಂತೆಯೇ ಇಲ್ಲ. ಆದರೂ ಹೋಗಿದ್ದರು. ಇದೆಲ್ಲದರ ಜೊತೆಗೆ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಬಯಸಿದ್ದು ಅಪ್ಪನ ಸರ್ಕಾರಿ ಕಾರ್‍ನ್ನು. ತಂದೆ ನಾಗಾಭರಣ ಅವರಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಗೂಟದ ಕಾರಿದೆ. ಪೊಲೀಸರ ತಪಾಸಣೆ ತಪ್ಪಿಸಿಕೊಳ್ಳಲು ಪನ್ನಗಾಭರಣ ಆ ಕಾರಿನಲ್ಲಿ ತೆರಳಿದ್ದರು. ಕಾರ್ ನಂಬರ್ ಞಂ 01 ಉ6121.
ಅಧ್ಯಕ್ಷರಿಗೆ ಕೊಟ್ಟಿರುವ ಇನ್ನೋವಾ ಕಾರಿನಲ್ಲಿ ಮಗ ಹೋಗಿದ್ದು ಹೇಗೆ? ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ನಾಗಾಭರಣ ಇದಕ್ಕೆಲ್ಲ ಹೇಗೆ ಅವಕಾಶ ಕೊಟ್ಟರು. ನಾಗಾಭರಣ ಮೌಲ್ಯಗಳನ್ನು, ಕಾನೂನುಗಳನ್ನು ಹೇಳುವುದು ಸಿನಿಮಾಗಳಲ್ಲಿ ಮಾತ್ರನಾ? ಕಾನೂನು ಇರುವುದು ಜನಸಾಮಾನ್ಯರಿಗೆ ಮಾತ್ರ, ನಮಗಲ್ಲ ಅನ್ನೋಕೆ ಅವರೇನೂ ರಾಜಕಾರಣಿಯಲ್ಲ. ರಾಜಕಾರಣಿಗಳನ್ನು ಜನ ಇವರ ಸ್ಟೇಟಸ್ ಇಷ್ಟೇ ಎಂದುಕೊಂಡು ಬಿಟ್ಟಿದ್ದಾರೆ. ಆದರೆ ನಾಡಿನ ಪ್ರಜ್ಞಾವಂತ, ಬುದ್ದಿಜೀವಿಗಳ ಸಾಲಿನಲ್ಲಿ ನಿಂತುಕೊಳ್ಳುವ ನಾಗಾಭರಣ ಕೂಡಾ ಅದೇ ಹಾದಿಗೆ ಸೇರಿಬಿಟ್ಟರಾ? ಇದು ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ.
ನನಗೆ ಗೊತ್ತಿಲ್ಲದೆ ನನ್ನ ಮಗ ಸರ್ಕಾರದ ಕಾರು ಬಳಸಿದ್ದಾನೆ ಎನ್ನಬಹುದೇನೋ ನಾಗಾಭರಣ. ಆದರೆ....