` ಸಿನಿ ಕಾರ್ಮಿಕರಿಗೆ 10 ಲಕ್ಷ ನೀಡಿದ ಪುನೀತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಿನಿ ಕಾರ್ಮಿಕರಿಗೆ 10 ಲಕ್ಷ ನೀಡಿದ ಪುನೀತ್
Puneeth Rajkumar

ಚಲನ ಚಿತ್ರರಂಗದ ಕಾರ್ಮಿಕರ ಕಷ್ಟಕ್ಕೆ ಮಿಡಿದಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರ ಕುಟುಂಬಗಳಿಗೆ ಈ ಹಣವನ್ನು ಬಳಸಿಕೊಳ್ಳಲು ಮನವಿ ಮಾಡಿದ್ದಾರೆ. ಪುನೀತ್ ಅವರಿಗೆ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಕೋವಿಡ್ ಮೊದಲ ಅಲೆ ಶುರುವಾದಾಗಲೂ ಪುನೀತ್ ನೆರವು ನೀಡಿದ್ದರು. ನೇರವಾಗಿ ಸರ್ಕಾರದ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಇದರ ನಡುವೆ ರಾಜ್ಯ ಸರ್ಕಾರದ ಕೋವಿಡ್ ವ್ಯಾಕ್ಸಿನ್ ಜಾಗೃತಿ ಅಭಿಯಾನದಲ್ಲೂ ಪಾಲ್ಗೊಂಡಿದ್ದಾರೆ ಪುನೀತ್.

ಇದೆಲ್ಲದರ ನಡುವೆ ಪುನೀತ್ ಅವರ  ಶಕ್ತಿಧಾಮ ಮತ್ತು ಅನಾಥಾಶ್ರಮಗಳಲ್ಲಿರುವವರ ಸೇವೆಯೂ ಅನೂಚಾನವಾಗಿ ಮುಂದುವರೆಯುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery