` 0% ನಿರ್ದೇಶಕ ಅಭಿರಾಮ್ ಕೂಡಾ ಕೊರೊನಾಗೆ ಬಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
0% ನಿರ್ದೇಶಕ ಅಭಿರಾಮ್ ಕೂಡಾ ಕೊರೊನಾಗೆ ಬಲಿ
Director Abhiram

ಪ್ರೆಸೆಂಟ್ ಪ್ರಪಂಚ 0% ಅನ್ನೋ ಹೆಸರಿನ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿತ್ತು. ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಚಿತ್ರಗಳನ್ನು ನಿರ್ಮಿಸಿದ್ದ ಡಿ.ಎಸ್.ಮಂಜುನಾಥ್ ಕೊರೊನಾಗೆ ಬಲಿಯಾಗಿದ್ದರು.

ಈಗ ಆ ಚಿತ್ರದ ನಿರ್ದೇಶಕ ಅಭಿರಾಮ್ ಕೂಡಾ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಅಭಿರಾಮ್‍ಗೆ ಕೆಲವು ದಿನಗಳ ಹಿಂದೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಆದರೆ ನಿರ್ಲಕ್ಷ್ಯ ವಹಿಸಿದ್ದ ಅಭಿರಾಮ್ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯಾಘಾತದಿಂದಾಗಿ ಮನೆಯಲ್ಲೇ ಅಭಿರಾಮ್ ಕೂಡಾ ಸಾವನ್ನಪ್ಪಿದ್ದಾರೆ.

ಸಂಯುಕ್ತ 2 ಚಿತ್ರವನ್ನು ನಿರ್ದೇಶಿದ್ದ ಅಭಿರಾಮ್, 0% ಲವ್ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದರು. ಗೆಲುವಿನ ಕನಸು ಕಾಣುತ್ತಿದ್ದರು. ಆದರೆ ವಿಧಿಬರಹ ಬೇರೆಯೇ ಇತ್ತು.