ಚಿತ್ರರಂಗದವರು ಸರ್ಕಾರದ ಜೊತೆ ಜೊತೆಯಲ್ಲೇ ಸಮರೋಪಾದಿಯಲ್ಲಿ ಕೋವಿಡ್ ಸಂತ್ರಸ್ತರ ಸೇವೆಗೆ ನಿಂತಿದ್ದಾರೆ. ಇದರ ನಡುವೆಯೇ ಶಿವಣ್ಣ, ತಮ್ಮ ಟೀಂ ಜೊತೆ ಸೈಲೆಂಟ್ ಆಗಿಯೇ ಕೋವಿಡ್ ಸಂತ್ರಸ್ತರ ಸೇವೆಗೆ ನಿಂತಿದ್ದಾರೆ.
ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಮತ್ತು ಶಿವಣ್ಣ ಬಾಯ್ಸ್ ತಂಡ ನಾಗವಾರದಲ್ಲಿರುವ ಕೂಲಿ ಕಾರ್ಮಿಕರ ಕಷ್ಟಕ್ಕೆ ನೆರವಾಗುತ್ತಿದೆ. ಆಸರೆ ಎಂಬ ಹೆಸರಿನಲ್ಲಿ ಈ ತಂಡ ಪ್ರತಿದಿನ 500 ಜನರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದೆ. ತಮ್ಮ ಮನೆಯ ಸುತ್ತಲೇ ಇರುವ ನಾಗವಾರದಲ್ಲಿರೋ 500ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಈ ತಂಡ ಊಟ ತಲುಪಿಸುತ್ತಿದೆ.
ಆಸರೆ : ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಅಭಿಯಾನ ನಡೆಸುತ್ತಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೆ ಈ ಸೇವೆ ನಡೆಯಲಿದೆ. ಇದನ್ನು 1000 ಜನರಿಗೆ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ ಶಿವಣ್ಣ ಬಾಯ್ಸ್.