ಥಿಯೇಟರ್ಸ್ ಓಪನ್ ಆಗಿಲ್ಲ. ಯಾವಾಗ ಓಪನ್ ಆಗುತ್ತೋ ಗೊತ್ತಿಲ್ಲ. ಲಾಕ್ ಡೌನ್ ಮುಗಿಯೋದ್ಯಾವಾಗ ಗೊತ್ತಿಲ್ಲ. ಓಪನಿಂಗ್‍ಗೆ ಅವಕಾಶ ಕೊಟ್ಟರೂ 3ನೇ ಅಲೆಯೇನಾದರೂ ಶುರುವಾದರೆ ಸರ್ಕಾರ ಮೊದಲು ಬಾಗಿಲು ಮುಚ್ಚಿಸುವುದೇ ಥಿಯೇಟರುಗಳನ್ನ. ಹೀಗಿದ್ದರೂ ಒಂದು ಭರ್ಜರಿ ಆಫರ್‍ಗೆ ನೋ ಎಂದಿದ್ದಾರೆ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು.
ಇತ್ತೀಚೆಗೆ ಒಟಿಟಿ ಕಂಪೆನಿಯೊಂದು ಕಿಚ್ಚ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಚಿತ್ರಕ್ಕೆ 35 ಕೋಟಿ ಆಫರ್ ಕೊಟ್ಟಿದ್ದರಂತೆ. ಆದರೆ ಸೂರಪ್ಪ ಬಾಬು ಒಂದೇ ಮಾತಿನಲ್ಲಿ ನೋ ಎಂದಿದ್ದಾರಂತೆ.
ನಮ್ಮ ಸಿನಿಮಾ ಥಿಯೇಟರಿಗೆ ಬಂದರೆ 100 ಕೋಟಿ ಬ್ಯುಸಿನೆಸ್ ಮಾಡುತ್ತೆ. ನಾನೇಕೆ ಒಟಿಟಿಗೆ ಕೊಡಲಿ ಅನ್ನೋದು ಸೂರಪ್ಪ ಬಾಬು ವಾದ. ಚಿತ್ರದ ಮೇಲೆ ಸೂರಪ್ಪ ಬಾಬು ಅವರಿಗೆ ಅಷ್ಟರಮಟ್ಟಿಗೆ ಕಾನ್ಫಿಡೆನ್ಸ್ ಇದೆ.
ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರದ ಎಲ್ಲ ಕೆಲಸಗಳೂ ಮುಗಿದಿವೆ. ಎಲ್ಲವೂ ಸರಿಯಾಗಿದ್ದರೆ ಇಷ್ಟೊತ್ತಿಗೆ ಥಿಯೇಟರಿನಲ್ಲಿರಬೇಕಿದ್ದ ಚಿತ್ರ ಕೋಟಿಗೊಬ್ಬ 3. ಸದ್ಯಕ್ಕಂತೂ ಕಿಚ್ಚನ ದರ್ಶನ ಭಾಗ್ಯವಿಲ್ಲ.